BCCI ನಿಂದ ಕಠಿಣ ನಿರ್ಧಾರ: IPL ಹರಾಜಿನ ನಂತರ ಆಟಗಾರ ಈ ರೀತಿ ಮಾಡಿದರೆ 2 ವರ್ಷ ನಿಷೇಧ ಖಚಿತ... ಯಾವ ವಿಚಾರಣೆಯೂ ಇರಲ್ಲ! ಬ್ಯಾನ್ ಅಷ್ಟೇ...
IPL Retain Rules: ಐಪಿಎಲ್ 2025 ಗಾಗಿ ಫ್ರಾಂಚೈಸಿಗೆ ಹರಾಜು ಮೊತ್ತವನ್ನು 120 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ಅಕ್ಟೋಬರ್ 31 ರೊಳಗೆ ರಿಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು.
IPL Auction 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ನವೆಂಬರ್‌ನಲ್ಲಿ ನಡೆಯಲಿರುವ ಮೆಗಾ ಹರಾಜಿನ ಮೊದಲು ರಿಟೈನ್ ನಿಯಮಗಳನ್ನು ಹೊರಡಿಸಿದೆ. ಈಗ ಐಪಿಎಲ್ ಫ್ರಾಂಚೈಸಿಗಳು ತಮ್ಮ ಪ್ರಸ್ತುತ ತಂಡದಿಂದ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಇದನ್ನು ರಿಟೈನ್ ಮೂಲಕ ಅಥವಾ ರೈಟ್ ಟು ಮ್ಯಾಚ್ (RTM) ಆಯ್ಕೆಯನ್ನು ಬಳಸುವ ಮೂಲಕ ಮಾಡಬಹುದು.
ಇನ್ನೊಂದೆಡೆ ಐಪಿಎಲ್ 2025 ಗಾಗಿ ಫ್ರಾಂಚೈಸಿಗೆ ಹರಾಜು ಮೊತ್ತವನ್ನು 120 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ಅಕ್ಟೋಬರ್ 31 ರೊಳಗೆ ರಿಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ: Milk Purity: ನೀವು ಕುಡಿಯುತ್ತಿರುವ ಹಾಲು ನಕಲಿ ಅಥವಾ ಅಸಲಿಯೇ? ಹೀಗೆ ಕಂಡು ಹಿಡಿಯಿರಿ
ಈ ನಡುವೆ ಐಪಿಎಲ್ ಆಡಳಿತ ಮಂಡಳಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇದು ವಿದೇಶಿ ಆಟಗಾರರ ಹುಬ್ಬೇರಿಸುವಂತೆ ಮಾಡಿದೆ. ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ನಂತರ ಸೀಸನ್‌ನಿಂದ ಕಣ್ಮರೆಯಾಗುವ ವಿದೇಶಿ ಆಟಗಾರರನ್ನು 2 ವರ್ಷಗಳ ಕಾಲ ನಿಷೇಧಿಸಲು ನಿರ್ಧರಿಸಿದೆ ಎನ್ನಲಾಗಿದೆ. ವೈದ್ಯಕೀಯ ಸ್ಥಿತಿಯಲ್ಲಿ ಮಾತ್ರ ಅವರಿಗೆ ಲೀಗ್ ತೊರೆಯಲು ಅವಕಾಶ ನೀಡಲಾಗುವುದು ಎಂದು ನಿರ್ಧಾರ ತಿಳಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ