“ಕೊಹ್ಲಿಯನ್ನು ಮೀರಿ ಹೋಗುವ ಸಮಯವಲ್ಲ”- ಟಿ20 ವಿಶ್ವಕಪ್’ಗೆ ವಿರಾಟ್ ಅಲಭ್ಯ ಸುದ್ದಿ ಬೆನ್ನಲ್ಲೇ ಮೌನ ಮುರಿದ ಪಾಕ್ ಕ್ರಿಕೆಟಿಗ
T-20 World Cup 2024: IPL 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ವಿರಾಟ್ ಕಂಬ್ಯಾಕ್’ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಮಧ್ಯೆ, ಕೆಟ್ಟ ಸುದ್ದಿಯೊಂದು ಹೆಚ್ಚು ವೈರಲ್ ಆಗುತ್ತಿದೆ. ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಅನುಮಾನವಿದೆ ಎಂದು ವರದಿಯಲ್ಲಿ ಹೇಳಲಾಗುತ್ತಿದೆ.
T20 World Cup 2024: ವಿರಾಟ್ ಕೊಹ್ಲಿಯನ್ನು ಟೀಂ ಇಂಡಿಯಾದ ಬೆನ್ನೆಲುಬು ಎಂದು ಕರೆದರೆ ತಪ್ಪಾಗದು. ಜರ್ಸಿ ಸಂಖ್ಯೆ 18 ರ ಈ ಬ್ಯಾಟ್ಸ್’ಮನ್ ಎಲ್ಲಾ ಮೂರು ಸ್ವರೂಪಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಸುದೀರ್ಘ ವಿರಾಮದಲ್ಲಿದ್ದಾರೆ.
IPL 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ವಿರಾಟ್ ಕಂಬ್ಯಾಕ್’ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಮಧ್ಯೆ, ಕೆಟ್ಟ ಸುದ್ದಿಯೊಂದು ಹೆಚ್ಚು ವೈರಲ್ ಆಗುತ್ತಿದೆ. ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಅನುಮಾನವಿದೆ ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಈ ವಿಚಾರವಾಗಿ ಮೌನ ಮುರಿದು ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ.
ಐಎಎನ್‌ಎಸ್’ಗೆ ನೀಡಿದ ಸಂದರ್ಶನದಲ್ಲಿ ಡ್ಯಾನಿಶ್ ಕನೇರಿಯಾ ವಿರಾಟ್ ಬಗ್ಗೆ ಚರ್ಚಿಸಿದ್ದಾರೆ. “ವಿರಾಟ್ ಅವರನ್ನು ನಿರ್ಲಕ್ಷಿಸುವುದು ಹೇಗೆ? ಅವರು ರನ್ ಗಳಿಸುತ್ತಿದ್ದಾರೆ. ಅವರು ತಂಡದಲ್ಲಿರಬೇಕು. ವಿರಾಟ್’ನನ್ನು ಮೀರಿ ನೋಡುವ ಸಮಯವಲ್ಲ. ಬದಲಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಮಯ. ಭಾರತ ಉತ್ತಮವಾಗಿ ಮುನ್ನಡೆಯುತ್ತಿದೆ ಮತ್ತು ವಿರಾಟ್ ಕೊಹ್ಲಿ ತಂಡದಲ್ಲಿ ನಿಸ್ಸಂದೇಹವಾಗಿ ಇರಬೇಕು” ಎಂದಿದ್ದಾರೆ.
2024 ರ ಟಿ 20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಇರಿಸಿಕೊಳ್ಳಲು ಆಯ್ಕೆದಾರರು ಯೋಚಿಸುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಕಾರಣ ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನ ನಿಧಾನಗತಿಯ ಪಿಚ್’ಗಳು. ಈ ಪಿಚ್‌ಗಳಲ್ಲಿ ವಿರಾಟ್ ಅವರ ಬ್ಯಾಟಿಂಗ್ ತಂತ್ರವು ತಂಡಕ್ಕೆ ಪರಿಣಾಮಕಾರಿಯಾಗಿರುವುದಿಲ್ಲ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ