ನವದೆಹಲಿ: 2036 ರಲ್ಲಿ ಒಲಂಪಿಕ್ಸ್ ನಡೆಸುವ ನಿಟ್ಟಿನಲ್ಲಿ ಭಾರತ ಮುಂದಾಗಿದೆ ಇದರ ಜೊತೆಗೆ ಈಗ ಅದು ಯೋಗ, ಕಬಡ್ಡಿ ಮತ್ತು ಖೋ ಖೋ, ಟ್ವೆಂಟಿ-20 ಕ್ರಿಕೆಟ್, ಚೆಸ್, ಸ್ಕ್ವಾಷ್ ಕ್ರೀಡೆಗಳನ್ನು ಸೇರಿಸಲು ಚಿಂತನೆ ನಡೆಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಾವಿನ ಹಣ್ಣು ತಿನ್ನುವುದರ 05 ಪ್ರಮುಖ ಪ್ರಯೋಜನಗಳು


ಮಿಶನ್ ಒಲಿಂಪಿಕ್ಸ್ ಸೆಲ್ ಮೂಲಕ ಕ್ರೀಡಾ ಸಚಿವಾಲಯ ಈಗ ಈ ಕ್ರೀಡೆಗಳನ್ನು ಸೇರಿಸಲು ಶಿಫಾರಸ್ಸು ಮಾಡಬಹುದು ಎನ್ನಲಾಗಿದೆ. ಕಳೆದ ವರ್ಷ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಮಿಷನ್ ಒಲಿಂಪಿಕ್ ಸೆಲ್ ನ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2036 ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ಭಾರತದ ಆಸಕ್ತಿಯನ್ನು ಅಧಿಕೃತವಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಈ ಕ್ರೀಡೆಗಳನ್ನು ಸಹಿತ ಸೇರಿಸಬೇಕೆನ್ನುವ ಪ್ರಸ್ತಾಪವನ್ನು ಕ್ರೀಡಾ ಸಚಿವಾಲಯ ಇಡಲಿದೆ.


ಇದನ್ನೂ ಓದಿ: ಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದು


2036 ರ ಒಲಿಂಪಿಕ್ಸ್‌ನ ಆರು ಪುಟಗಳ ಶಿಫಾರಸ್ಸುಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (PoSH) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO), ಡೋಪಿಂಗ್ ಬೆದರಿಕೆಯನ್ನು ನಿಗ್ರಹಿಸುವುದು, ಫೆಡರೇಶನ್‌ಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸುವುದು, ತಳಮಟ್ಟದ ಮೇಲೆ ಕೇಂದ್ರೀಕರಿಸುವುದು,ತರಬೇತುದಾರರು ಮತ್ತು ತೀರ್ಪುಗಾರರನ್ನು ಅಭಿವೃದ್ಧಿಪಡಿಸುವುದು ಮತ್ತು ಹೆಚ್ಚಿನ ಮೂಲಸೌಕರ್ಯಗಳನ್ನು ನಿರ್ಮಿಸುವುದನ್ನು ಸಹ ಉಲ್ಲೇಖಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.