ದುಬೈ: ಇಲ್ಲಿ ನಡೆಯುತ್ತಿರುವ ವಿಯಾನ್ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಪುಲ್ವಾಮಾ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತಾ ಇಂತಹ ಸಂದರ್ಭದಲ್ಲಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಹಾಗೂ ಕುಟುಂಬದ ಸದಸ್ಯರ ಪರವಾಗಿ ನಿಲ್ಲಬೇಕಾಗಿದೆ ಎಂದರು.


COMMERCIAL BREAK
SCROLL TO CONTINUE READING

2019 ರ ವಿಶ್ವಕಪ್ ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಆಡಬೇಕೇ ಬೇಡವೇ ಎನ್ನುವ ವಿಯಾನ್ ನ  ಕ್ರೀಡಾ ಸಂಪಾದಕ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದಾಗ ಲಕ್ಷ್ಮಣ್ "ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿದ್ದದ್ದು ಕ್ರಿಕೆಟ್ ಕೊನೆಯದು"ಎಂದರು. 



ಇಂತಹ ದುಃಖದ ಸಮಯದಲ್ಲಿ ನಾವು ಹುತಾತ್ಮರಾಗಿರುವ ಸೈನಿಕರ ಕುಟುಂಬದೊಂದಿಗೆ ಜೊತೆಯಾಗಿ ನಿಲ್ಲಬೇಕಾಗಿದೆ. ಆ ಮೂಲಕ ಭಯೋತ್ಪಾದಕರು ಮತ್ತು ಭಯೋತ್ಪಾದನೆಗೆ ಅಂತ್ಯ ಹಾಡುವುದನ್ನು ನಾವು ಖಚಿತ ಪಡಿಸಿಕೊಳ್ಳಬೇಕು ಎಂದು ಲಕ್ಷ್ಮಣ್ ತಿಳಿಸಿದರು.


ಜೂನ್ 16 ರಂದು ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡದಿರಬಹುದೆಂದು ವದಂತಿಗಳಿವೆ ಆದರೆ ಈ ಕುರಿತಾಗಿ ಯಾವುದೇ ಐಸಿಸಿಯಿಂದ ಅಧಿಕೃತ ಘೋಷಣೆ ಬಂದಿಲ್ಲ