IND vs AFG: ಪಂದ್ಯದ ವೇಳೆ ಅಂಪೈರ್ಗೆ ಕಿಚಾಯಿಸಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!
IND vs AFG: ಈ ಪಂದ್ಯದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾರಿಗೆ ಕಿಚಾಯಿಸಿದ ಪ್ರಸಂಗ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರು: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ-20 ಪಂದ್ಯವು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು. ಅಫ್ಘನ್ ಬೌಲರ್‍ಗಳ ಬೆಂಡೆತ್ತಿದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಪಂದ್ಯ ಟೈ ಆಗುವ ಮೂಲಕ 2 ಸೂಪರ್ ಓವರ್ ನಡೆಯಬೇಕಾಯಿತು. ಅಂತಿಮವಾಗಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಸುವ ಮೂಲಕ 3-0ರಿಂದ ಸರಣಿ ಕ್ಲೀನ್ ಸ್ವೀಪ್ ಸಾಧಿಸಿತು.
ಈ ಪಂದ್ಯದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾರಿಗೆ ಕಿಚಾಯಿಸಿದ ಪ್ರಸಂಗ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಂದ್ಯದ 2ನೇ ಓವರ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಎಸೆದ ಬಾಲ್ ಪ್ಯಾಡ್‌ಗೆ ತಾಗುವ ಮೊದಲು ರೋಹಿತ್ ಅವರ ಬ್ಯಾಟ್‌ನ ಒಳ ಅಂಚನ್ನು ಸ್ಪರ್ಶಿಸಿತು. ಈ ವೇಳೆ ರೋಹಿತ್ ಸಿಂಗಲ್ ರನ್ ತೆಗೆದುಕೊಂಡಿದ್ದರು. ಆದರೆ ಅಂಪೈರ್ ಅದಕ್ಕೆ ಲೆಗ್-ಬೈ ನೀಡಿದರು.
ಇದನ್ನೂ ಓದಿ: T20 World Cup: ಅಫ್ಘನ್ ವಿರುದ್ಧ ಅಬ್ಬರಿಸಿದ ಈ ಆಟಗಾರನಿಗೆ ಟಿ20 ವಿಶ್ವಕಪ್’ನಲ್ಲಿ ಸ್ಥಾನ ಫಿಕ್ಸ್!
ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಿದ ಸಿಎಂ ಸಿದ್ದರಾಮಯ್ಯ
ಗೆಲುವಿನ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪಂದ್ಯವನ್ನು ಟೈ ಮಾಡಿದರು. ಅಫ್ಘನ್ ಪರ ಗುಲ್ಬದಿನ್ ನಾಯಬ್(55), ರಹಮಾನುಲ್ಲಾ ಗುರ್ಬಾಜ್(50), ನಾಯಕ ಇಬ್ರಾಹಿಂ ಜದ್ರಾನ್(50) ಮತ್ತು ಮೊಹಮ್ಮದ್ ನಬಿ 35 ರನ್ ಗಳಿಸಿ ಮಿಂಚಿದರು. ನಂತರ ನಡೆದ ಮೊದಲ ಸೂಪರ್ ಓವರ್ ಕೂಡ ಟೈ ಆಯಿತು. ಬಳಿಕ ನಡೆದ 2ನೇ ಸೂಪರ್ ಓವರ್‍ನಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.