Team India : ಮೂರನೇ ಟೆಸ್ಟ್ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದೆ ಟೀಂ ಇಂಡಿಯಾ!
India vs Australia : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ಮಾರ್ಚ್ 1 ಅಂದರೆ ಬುಧವಾರದಂದು ನಡೆಯಲಿದೆ.
India vs Australia, 3rd Test : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ಮಾರ್ಚ್ 1 ಅಂದರೆ ಬುಧವಾರದಂದು ನಡೆಯಲಿದೆ. ಇಂದೋರ್ ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ ವಿಶ್ವದ ಬಹುತೇಕ ತಂಡಗಳು ಮಾಡಲಾಗದ ಶ್ರೇಷ್ಠ ದಾಖಲೆಯನ್ನು ಮಾಡಿ ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸಲಿದೆ. ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ, ಏಕಕಾಲಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್, ಟೆಸ್ಟ್, ಏಕದಿನ ಮತ್ತು ಟಿ20 ಮೂರು ಮಾದರಿಗಳಲ್ಲಿ ವಿಶ್ವದ ನಂ.1 ತಂಡವಾಗಲಿದೆ. ಹೇಗೆ? ಈ ಕೆಳಗಿಯೇ ಸಂಪೂರ್ಣ ಮಾಹಿತಿ...
ಇಂದೋರ್ ಟೆಸ್ಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಟೀಂ ಇಂಡಿಯಾ
ಟೀಂ ಇಂಡಿಯಾ ಪ್ರಸ್ತುತ ODI ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ವಿಶ್ವದ ನಂಬರ್-1 ತಂಡವಾಗಿದೆ. ಇಂದೋರ್‌ನಲ್ಲಿ ಮಾರ್ಚ್ 1 ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲೂ ವಿಶ್ವದ ನಂ.1 ತಂಡವಾಗಲಿದೆ. ಇದರೊಂದಿಗೆ ಭಾರತ ಏಕಕಾಲಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್, ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಗಳಲ್ಲಿ ವಿಶ್ವದ ನಂ.1 ತಂಡವಾಗಿ ಹೊಸ ಇತಿಹಾಸ ಸೃಷ್ಟಿಸಲಿದೆ. ಅಂತರಾಷ್ಟ್ರೀಯ ಕ್ರಿಕೆಟ್, ಟೆಸ್ಟ್, ODI ಮತ್ತು ಟಿ20 ಎಲ್ಲಾ ಮೂರು ಸ್ವರೂಪಗಳಲ್ಲಿ ಏಕಕಾಲದಲ್ಲಿ ಟೀಂ ಇಂಡಿಯಾ ವಿಶ್ವದ ನಂಬರ್-1 ತಂಡವಾಗಲು ಒಂದೊಳ್ಳೆ ಅವಕಾಶ ಇದಾಗಿದೆ.
ಇದನ್ನೂ ಓದಿ : Indian Cricket: 3 ವರ್ಷಗಳ ಬಳಿಕ ಖುಲಾಯಿಸಿದ ಈ ಕ್ರಿಕೆಟಿಗನ ಅದೃಷ್ಟ: ನೇರವಾಗಿ ಸಿಕ್ತು ನಾಯಕ ಸ್ಥಾನ!
ಭಾರತವು ಮೊದಲ ಬಾರಿಗೆ ನಿರ್ಮಿಸಲಿದೆ ಈ 'ಮಹಾರಿಕಾರ್ಡ್'
ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಈ ಶ್ರೇಷ್ಠ ದಾಖಲೆಯನ್ನು ನಿರ್ಮಿಸುವ ಹಂಬಲದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್, ಟೆಸ್ಟ್, ODI ಮತ್ತು ಟಿ20 ಎಲ್ಲಾ ಮೂರು ಸ್ವರೂಪಗಳಲ್ಲಿ ಏಕಕಾಲದಲ್ಲಿ ವಿಶ್ವದ ನಂಬರ್-1 ತಂಡವಾಗಲು ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಸಾಧ್ಯವಾಗಿಲ್ಲ. 2013 ರಲ್ಲಿ, ದಕ್ಷಿಣ ಆಫ್ರಿಕಾ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್, ಟೆಸ್ಟ್, ODI ಮತ್ತು ಟಿ20 ಎಲ್ಲಾ ಮೂರು ಸ್ವರೂಪಗಳಲ್ಲಿ ಏಕಕಾಲದಲ್ಲಿ ವಿಶ್ವದ ನಂಬರ್-1 ತಂಡವಾಗಿ ಹೊರಹೊಮ್ಮಿತು. ದಕ್ಷಿಣ ಆಫ್ರಿಕಾದ ನಂತರ ವಿಶ್ವದ ಯಾವ ತಂಡಕ್ಕೂ ಈ ಶ್ರೇಷ್ಠ ದಾಖಲೆ ಮಾಡಲು ಸಾಧ್ಯವಾಗಿಲ್ಲ. ಹೀಗಿರುವಾಗ ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಈ ಶ್ರೇಷ್ಠ ದಾಖಲೆಯನ್ನು ನಿರ್ಮಿಸಬಹುದು.
ಇದನ್ನೂ ಓದಿ : ಏಷ್ಯನ್ ಗೇಮ್ಸ್ ಮ್ಯಾರಥಾನ್’ಗೆ ಕರ್ನಾಟಕದ ಬೆಳ್ಳಿಯಪ್ಪ ಸೇರಿ ಭಾರತದ ಮೂವರು ಓಟಗಾರರು ಎಂಟ್ರಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.