Border Gavaskar Trophy 2024-25: ವರ್ಷಾಂತ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಾರಿ ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ನವೆಂಬರ್ 22ರಿಂದ 26ರವರೆಗೆ ನಡೆಯಲಿರುವ ಪರ್ತ್ ಟೆಸ್ಟ್ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ. ಭಾರತ 2016ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡುಬಂದಿದೆ. ಆಸ್ಟ್ರೇಲಿಯಾ ತನ್ನ ಸ್ವಂತ ನೆಲದಲ್ಲೇ ಸತತ ಎರಡು ಬಾರಿ ಸೋಲು ಕಂಡಿದೆ. ಈ ಬಾರಿಯೂ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಗುರಿಯೂ ಗೆಲುವೇ ಆಗಿದೆ. ಆದರೆ ಈ ಮೆಗಾ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಬಗ್ಗೆ ಸ್ಟಾರ್ ಸ್ಪಿನ್ನರ್ ನಾಥನ್ ಲಿಯಾನ್ ಭವಿಷ್ಯ ನುಡಿದಿದ್ದಾರೆ.


COMMERCIAL BREAK
SCROLL TO CONTINUE READING

ಭವಿಷ್ಯ ನುಡಿದ ಲಿಯಾನ್!  


ಈ ವರ್ಷ ನವೆಂಬರ್‌ನಲ್ಲಿ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆತಿಥೇಯರು ಭಾರತವನ್ನು ಕ್ಲೀನ್‌ಸ್ವೀಪ್ ಮಾಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಭವಿಷ್ಯ ನುಡಿದಿದ್ದಾರೆ. 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವು ಸೇರಿದಂತೆ ಭಾರತವು ಕಳೆದ 10 ವರ್ಷಗಳಿಂದ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2011ರಲ್ಲಿ ಆಸ್ಟ್ರೇಲಿಯಾ ಈ ಸರಣಿಯಲ್ಲಿ ಕೊನೆಯ ಬಾರಿ ಕ್ಲೀನ್ ಸ್ವೀಪ್ ಮಾಡಿತ್ತು.


ಇದನ್ನೂ ಓದಿ: ಬಾಲ್ಯದ ಸ್ನೇಹದಿಂದ ಜೀವನ ಸಂಗಾತಿವರೆಗೆ; ಪೃಥಿ ನಾರಾಯಣನ್ ಜೊತೆ ಆರ್.ಅಶ್ವಿನ್ ಲವ್ ಸ್ಟೋರಿ!


ಆಸ್ಟ್ರೇಲಿಯಾ 5-0 ಅಂತರದಿಂದ ಗೆಲ್ಲಲಿದೆ! 


ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ಲಿಯಾನ್‌, 'ನಾವು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದು 10 ವರ್ಷಗಳಾಗಿವೆ. ಇಂಗ್ಲೆಂಡ್ ಭಾರತದಲ್ಲಿದ್ದಾಗ ಅವರ ಆಟವನ್ನು ನೋಡುತ್ತಿದ್ದಾಗ ನಾನು ಈ ಸರಣಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ನಾನು ಆಟವನ್ನು ಪ್ರೀತಿಸುತ್ತೇನೆ ಮತ್ತು ಉತ್ತಮ ಟೆಸ್ಟ್ ಪಂದ್ಯವನ್ನು ವೀಕ್ಷಿಸುತ್ತೇನೆ. ಆದರೆ ನಾನು ಈ ಸರಣಿಯ ಮೇಲೆ ಬಹಳ ಸಮಯದಿಂದ ಕಣ್ಣಿಟ್ಟಿದ್ದೇನೆ. ಈ ಬಾರಿ ಆಸ್ಟ್ರೇಲಿಯಾ 5-0 ಅಂತರದಲ್ಲಿ ಸರಣಿ ಗೆಲ್ಲುತ್ತದೆʼ ಎಂದು ಅವರು ಭವಿಷ್ಯ ನುಡಿದಿದ್ದಾರೆ. 


ಬೃಹತ್‌ ಮೊತ್ತ ಗಳಿಸಬೇಕು


ಭಾರತದ ಬೌಲಿಂಗ್ ಲೈನ್‌ಅಪ್ ವಿರುದ್ಧ ದೊಡ್ಡ ಸ್ಕೋರ್ ಮಾಡಲು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಲಿಯಾನ್ ಸಂದೇಶ ನೀಡಿದ್ದಾರೆ. ನಾವು ಈ ಸಾಧನೆ ಮಾಡಬೇಕಾದರೆ ದೊಡ್ಡ ಮೊತ್ತವನ್ನು ಗಳಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ. ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಟ್ರಾವಿಸ್ ಹೆಡ್ ಅವರಂತಹ ಶತಕಗಳನ್ನು ಗಳಿಸುವಷ್ಟು ಪ್ರತಿಭಾವಂತ ಆಟಗಾರರು ನಮಗೆ ಬೇಕು. ಅವರೆಲ್ಲರೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು. ನನಗೆ 101 ಅಥವಾ 107 ಬೇಡ, ನನಗೆ 180 ಮತ್ತು 200 ಬೇಕು. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಲಿಯಾನ್ ಅವರು 27 ಪಂದ್ಯಗಳಲ್ಲಿ 31.56 ಸರಾಸರಿಯಲ್ಲಿ 121 ವಿಕೆಟ್‌ಗಳನ್ನು ಪಡೆಯುವುದರೊಂದಿಗೆ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.   


ಭಾರತದ ಆಸ್ಟ್ರೇಲಿಯಾ ಪ್ರವಾಸ 2024-25ರ ವೇಳಾಪಟ್ಟಿ


  • ಪರ್ತ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ - 22 ರಿಂದ 26 ನವೆಂಬರ್

  • ಅಡಿಲೇಡ್ ಓವಲ್‌ನಲ್ಲಿ 2ನೇ ಟೆಸ್ಟ್ - 6 ರಿಂದ 10 ಡಿಸೆಂಬರ್ (ಹಗಲು-ರಾತ್ರಿ)

  • ಗಬ್ಬಾ, ಬ್ರಿಸ್ಬೇನ್‌ನಲ್ಲಿ 3ನೇ ಟೆಸ್ಟ್ - 14 ರಿಂದ 18 ಡಿಸೆಂಬರ್

  • 4ನೇ ಟೆಸ್ಟ್ ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ - ಡಿಸೆಂಬರ್ 26 ರಿಂದ 30 ಡಿಸೆಂಬರ್

  • ಸಿಡ್ನಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 5ನೇ ಟೆಸ್ಟ್ - ಜನವರಿ 3 ರಿಂದ ಜನವರಿ 7, 2025


ಇದನ್ನೂ ಓದಿ: ಸ್ವರ್ಗದಿಂದ ಧರೆಗಿಳಿದ ಅಪ್ಸರೆಯಂತಿದ್ದಾಳೆ ಈ ನಿರೂಪಕಿ!ಟೀಂ ಇಂಡಿಯಾದ ಖ್ಯಾತ ಕ್ರಿಕೆಟರ್ ನ ಪತ್ನಿ ಈಕೆ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.