IND vs AUS, IND Playing XI: 2024ರ ಟಿ20 ವಿಶ್ವಕಪ್‌ನಲ್ಲಿ(T20 World Cup 2024) ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ(India) ಇನ್ನು 24 ಗಂಟೆಯೊಳಗೆ ಮತ್ತೊಂದು ಮಹತ್ವದ ಕದನಕ್ಕೆ ಸಜ್ಜಾಗುತ್ತಿದೆ. ಶನಿವಾರ ಬಾಂಗ್ಲಾದೇಶ(Bangladesh) ವಿರುದ್ಧ ನಡೆದ ಎರಡನೇ ಸೂಪರ್ 8 ಪಂದ್ಯದಲ್ಲಿ  ಟೀಂ ಇಂಡಿಯಾ 50 ರನ್ ಗಳ ಜಯ ಸಾಧಿಸಿದೆ. 


COMMERCIAL BREAK
SCROLL TO CONTINUE READING

ಇನ್ನೂ ಭಾನುವಾರ, ಜೂನ್‌ 23ರಂದು ಸೇಂಟ್ ಲೂಸಿಯಾದ ಡ್ಯಾರೆನ್ ಸಮ್ಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡ  ಅಂತಿಮ ಸೂಪರ್-8(Super-8) ಪಂದ್ಯದಲ್ಲಿ ಆಸ್ಟ್ರೇಲಿಯ(Australia) ತಂಡದ ವಿರುದ್ಧ ಕಾದಾಡಲಿದೆ.


ಈ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ಗ್ರೂಪ್-1 ಟಾಪರ್ ಆಗಿ ಸೆಮಿಫೈನಲ್ ಪ್ರವೇಶಿಸಲಿದೆ. ಈವರೆಗೂ ಉತ್ತಮ ಆಟ ಪ್ರದರ್ಶಿಸುತ್ತಿರುವ ಟೀಂ ಇಂಡಿಯಾ, ಗೆಲ್ಲುವ ನಿರೀಕ್ಷೆಯಲ್ಲಿ ಎದುರಾಳಿ ತಂಡದ ವಿರುದ್ಧ ಕಣಕ್ಕಿಳಿಯಲಿದೆ.


ಇದನ್ನೂ ಓದಿ: IND vs BAN : "ಪಂದ್ಯ ಗೆಲ್ಲಲು ಮುಖ್ಯ ಕಾರಣ ಆ ಒಬ್ಬ ಆಟಗಾರ"..! ಹಾಡಿ ಹೊಗಳಿದ ರೋಹಿತ್‌ ಶರ್ಮಾ


2023ರ ODI(2023 ODI) ವಿಶ್ವಕಪ್ ಫೈನಲ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಕಾದು ಕೂತಿದೆ. ಆದರೆ ಸೇಂಟ್ ಲೂಸಿಯಾದಲ್ಲಿರುವ ಡ್ಯಾರೆನ್ ಸಾಮಿ ಸ್ಟೇಡಿಯಂ ಪೇಸ್ ಬೌಲಿಂಗ್‌ಗೆ ಸೂಕ್ತವಾಗಿದೆ. ಮೇಲಾಗಿ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಈ ಕ್ರಮದಲ್ಲಿ ಟೀಂ ಇಂಡಿಯಾ ಕಾರ್ಯತಂತ್ರ ಬದಲಾವಣೆ ಮಾಡುವ ಸಾಧ್ಯತೆ ಇದೆ.


ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಕಣಕ್ಕೆ ಇಳಿಯುವುದು ಟೀಂ ಇಂಡಿಯಾಗೆ ಉತ್ತಮ ಆಯ್ಕೆಯಾಗಿದೆ. ಹೀಗೆ ಯೋಚಿಸಿದರೆ ಜಡೇಜಾ (Ravindra Jadeja) ಬದಲು ಯಶಸ್ವಿ ಜೈಸ್ವಾಲ್(Yashasvi jaiswal) ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನು ಹೊರತುಪಡಿಸಿ ಅಂತಿಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. 


ಇದನ್ನೂ ಓದಿ: ಕೊಹ್ಲಿ ಹೆಸರಲ್ಲಿ ಮತ್ತೊಂದು ದಾಖಲೆ: ಅತೀ ಹೆಚ್ಚು ರನ್‌ ಕಲೆಹಾಕಿರುವವರ ಪಟ್ಟಿಯಲ್ಲಿ ಕಿಂಗ್‌ಗೆ ಅಗ್ರಸ್ಥಾನ..!


IND Playing XI:(ಅಂದಾಜು)
ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ, ರಿಷಬ್ ಪಂತ್ , ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.