IND vs AUS 4th Test Match : ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ, ಆರಂಭಿಕ ಆಟಗಾರ ಶುಭಮನ್ ಗಿಲ್ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಶುಭಮನ್ ಗಿಲ್ ಮಹತ್ವದ ದಾಖಲೆಯೊಂದನ್ನು ಮಾಡಿದ್ದಾರೆ, ಈ ವರ್ಷ ಯಾವುದೇ ಬ್ಯಾಟ್ಸ್‌ಮನ್ ಮಾಡಲಾಗದ ಸಾಧನೆ ಇದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ...


COMMERCIAL BREAK
SCROLL TO CONTINUE READING

ಶುಭಮನ್ ಗಿಲ್ ಐತಿಹಾಸಿಕ ಇನ್ನಿಂಗ್ಸ್


ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ಅವರ ಎರಡನೇ ಶತಕವಾಗಿದೆ. ಇದಕ್ಕೂ ಮೊದಲು ಶುಭಮನ್ ಗಿಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ದಾಖಲಿಸಿದ್ದರು. ಅದೇ ಸಮಯದಲ್ಲಿ, ಈ ವರ್ಷ 3 ತಿಂಗಳಲ್ಲಿ, ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಇನ್ನಿಂಗ್ಸ್ ಆಡುವ ಮೂಲಕ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. 2023 ರಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ.


ಇದನ್ನೂ ಓದಿ : Gautam Gambhir: ಗೌತಮ್ ಗಂಭೀರ್ ಹೆಲ್ಮೆಟ್’ಗೆ ಗಟ್ಟಿಯಾಗಿ ತಗುಲಿದ ಬಾಲ್: ತಕ್ಷಣವೇ ಪಾಕ್ ಆಟಗಾರ ಮಾಡಿದ್ದೇನು ಗೊತ್ತಾ?


ಟಿ20 ಶತಕ ಸಿಡಿಸಿದ ಗಿಲ್ 


23 ವರ್ಷದ ಶುಭಮನ್ ಗಿಲ್ ಅವರು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ 54 ಎಸೆತಗಳಲ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಶತಕವನ್ನು ಪೂರ್ಣಗೊಳಿಸಿದರು. ಶುಭಮನ್ ಗಿಲ್ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. 126 ರನ್ ಗಳಿಸಿ ಅಜೇಯರಾಗಿ ಮರಳಿದರು. ಅವರು 63 ಎಸೆತಗಳ ಅಜೇಯ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಹೊಡೆದರು.


ಸ್ಟ್ರಾಂಗ್ ಆಗಿದೆ ಟೀಂ ಇಂಡಿಯಾ


ಅಹಮದಾಬಾದ್ ಟೆಸ್ಟ್‌ನ ಮೂರನೇ ದಿನದಾಟದಂತ್ಯಕ್ಕೆ ಭಾರತ ಟಿ-ಬ್ರೇಕ್‌ಗೆ 2 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ. ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ. ಭಾರತ ಇನ್ನೂ ಆಸ್ಟ್ರೇಲಿಯಾಕ್ಕಿಂತ 292 ರನ್ ಹಿಂದಿದೆ. ಶುಭಮನ್ ಗಿಲ್ 197 ಎಸೆತಗಳಲ್ಲಿ 103 ರನ್ ಗಳಿಸಿ ಆಡುತ್ತಿದ್ದಾರೆ. ಅದೇ ಸಮಯದಲ್ಲಿ ಚೇತೇಶ್ವರ ಪೂಜಾರ 42 ರನ್‌ಗಳ ಇನಿಂಗ್ಸ್‌ನಲ್ಲಿ ಔಟಾದರು. ಇದಕ್ಕೂ ಮುನ್ನ ಉಸ್ಮಾನ್ ಖವಾಜಾ ಅವರ 180 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು.


ಇದನ್ನೂ ಓದಿ : Video: ಅಭಿಮಾನಿಗೆ ಜೋರಾಗಿ ಹೊಡೆದ ಖ್ಯಾತ ಕ್ರಿಕೆಟಿಗ... ಟೋಪಿ ಮುಟ್ಟಿದ್ದಕ್ಕೆ ಈ ಕೋಪ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.