ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ (Border-Gavaskar Trophy) ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯು 1-1 ಅಂಕದೊಂದಿಗೆ ಸಮಬಲ ಸಾಧಿಸಿವೆ. ಈಗ ನಾಲ್ಕನೇ ಮತ್ತು ಅಂತಿಮ ಪಂದ್ಯ ಜನವರಿ 15 ರಿಂದ ಬ್ರಿಸ್ಬೇನ್‌ನ ಗಬಾದಲ್ಲಿ ನಡೆಯಲಿದ್ದು ಎಲ್ಲರ ಚಿತ್ತ ನಾಲ್ಕನೇ ಪಂದ್ಯದತ್ತ ನೆಟ್ಟಿದೆ.


Rishab Pant) ಅವರು ಔಟ್ ಆದ ಬಳಿಕ  ಭಾರತದ ಭರವಸೆ ಕೊಂಚ ಕುಸಿದಿತ್ತು. ಆದರೆ ಹನುಮಾ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಅವರು ಬಹಳ ತಾಳ್ಮೆಯಿಂದ ಆಡುವ ಮೂಲಕ ಭಾರತಕ್ಕೆ ಆಸರೆಯಾದರು. ಈ ಜೋಡಿಯ 62 ರನ್‌ಗಳ ಜೊತೆಯಾಟ ಕಾಂಗರೂ ಪಡೆಯ ಕನಸನ್ನು ಭಗ್ನಗೊಳಿಸಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : IND vs AUS : ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡ Mohammed Siraj
 
ಪೂಜಾರ ಫಿಫ್ಟಿ :
ಅತ್ಯಂತ ಜವಾಬ್ದಾರಿಯುತವಾಗಿ ಆಡಿದ ಚೇತೇಶ್ವರ ಪೂಜಾರ (Cheteshwar Pujara)  205 ಎಸೆತಗಳಲ್ಲಿ 77 ರನ್ ಗಳಿಸಿದರು. ಈ ಸಮಯದಲ್ಲಿ ಅವರು 12 ಬೌಂಡರಿಗಳನ್ನು ಸಹ ಹೊಡೆದರು. ಅವರು ತಮ್ಮ 19 ನೇ ಟೆಸ್ಟ್ ಶತಮಾನದತ್ತ ಸಾಗುತ್ತಿದ್ದರು ಆದರೆ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಔಟ್ ಮಾಡಿದರು.


ಶತಕ ತಪ್ಪಿಸಿಕೊಂಡ ಪಂತ್ :
ಗಾಯಗೊಂಡು ನೋವಿನಿಂದ ಬಳಲುತ್ತಿದ್ದ ರಿಷಬ್ ಪಂತ್ ಇದರ ಹೊರತಾಗಿಯೂ 118 ಎಸೆತಗಳಲ್ಲಿ ಅದ್ಭುತ 97 ರನ್ ಗಳಿಸಿದರು, ಇದರಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಸೇರಿದೆ.  ಅವರು ನಾಥನ್ ಲಿಯಾನ್‌ಗೆ ಕ್ಯಾಚ್ ಕೊಟ್ಟು ಔಟಾದರು. 


ಇದನ್ನೂ ಓದಿ : IND vs AUS : T Natarajan ಅವರ ಸ್ಕ್ರಿಪ್ಟ್ ಅನ್ನು ಯಾರು ಬರೆಯುತ್ತಿದ್ದಾರೆ ? RP Singh


6000 ಕ್ಲಬ್‌ನಲ್ಲಿ ಪೂಜಾರ :
ಟೀಮ್ ಇಂಡಿಯಾದ ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ ಕ್ರಿಕೆಟ್‌ನ ಅತಿ ಉದ್ದದ ಸ್ವರೂಪದಲ್ಲಿ 6000 ರನ್ ಗಳಿಸಿದರು. ಅವರು ಈ ಪಂದ್ಯದಲ್ಲಿ 47ನೇ ರನ್ ಗಳಿಸಿದಾಗ ಈ ದಾಖಲೆ ಸಾಧಿಸಿದರು. ಈ ಅಂಕಿ ಅಂಶವನ್ನು ಮುಟ್ಟಿದ ಟೀಮ್ ಇಂಡಿಯಾದ 11 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.