ನವದೆಹಲಿ: ಮಾರ್ಚ್ 9ರಿಂದ ಪ್ರಾರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಸರಣಿಯ ಕೊನೆಯ ಟೆಸ್ಟ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದೋರ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹೋಗುವ ಭಾರತದ ಆಸೆಗೆ ಆಸ್ಟ್ರೇಲಿಯಾ ಬ್ರೇಕ್ ಹಾಕಿದೆ. ಆದರೆ ಟೀಂ ಇಂಡಿಯಾಗೆ ಇನ್ನೂ ಅವಕಾಶವಿದೆ. 3ನೇ ಟೆಸ್ಟ್‌ನಲ್ಲಿನ ಸೋಲಿನ ನಂತರ ಅಹಮದಾಬಾದ್ ಟೆಸ್ಟ್‌ಗಾಗಿ ಟೀಂ ಇಂಡಿಯಾದಲ್ಲಿ ಹಲವು ಪ್ರಮುಖ ಬದಲಾವಣೆ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

 ಈ ಮಾರಕ ಬೌಲರ್ ತಂಡ ಸೇರಿಕೊಳ್ಳಲಿದ್ದಾನೆ!


3ನೇ ಟೆಸ್ಟ್‌ನಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಭಾರತ ತಂಡ ವಿಶ್ರಾಂತಿ ನೀಡಿದೆ. ಅವರ ಜಾಗದಲ್ಲಿ ಉಮೇಶ್ ಯಾದವ್‌ಗೆ ಅವಕಾಶ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಶಮಿ ಈ ಮಹತ್ವದ ಪಂದ್ಯಕ್ಕೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮರಳಬಹುದು. ಆದರೆ 3ನೇ ಟೆಸ್ಟ್‍ ಪಂದ್ಯದಲ್ಲಿ ಉಮೇಶ್ ಉತ್ತಮವಾಗಿ ಬೌಲಿಂಗ್ ಮಾಡಿ 3 ವಿಕೆಟ್ ಪಡೆದರು. ಶಮಿ ಆಡಿದ ಮೊದಲೆರಡು ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದರು.


ಇದನ್ನೂ ಓದಿ: IND vs AUS : ಟೆಸ್ಟ್‌ನಿಂದ ಈ ಆಟಗಾರನನ್ನು ಟೀಂನಿಂದ  ಹೊರಗಿಟ್ಟ ರೋಹಿತ್-ದ್ರಾವಿಡ್! 


ಈ ಆಟಗಾರನ ಮೇಲೆ ಕಣ್ಣು!


ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಬದಲಿಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೆ.ಎಸ್.ಭರತ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಪಘಾತದಲ್ಲಿ ರಿಷಬ್ ಪಂತ್ ಗಾಯಗೊಂಡಿದ್ದರಿಂದ ಭರತ್ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದರು. ಆದರೆ ಅವರು ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಆಡಿದ ಎಲ್ಲಾ 3 ಟೆಸ್ಟ್‌ಗಳಲ್ಲಿ ಭರತ್ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 57 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ 4ನೇ ಟೆಸ್ಟ್‌ನಲ್ಲಿ ಇಶಾನ್ ಕಿಶನ್‌ಗೆ ಅವಕಾಶ ನೀಡುವ ಬಗ್ಗೆ ಯೋಚಿಸಬಹುದು. ಕಿಶನ್ ಭಾರತದ ಪರ ಏಕದಿನ ಮತ್ತು ಟಿ-20ಯಲ್ಲಿ ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಅವರಿಗೆ ಇನ್ನೂ ಟೆಸ್ಟ್‌ನಲ್ಲಿ ಅವಕಾಶ ಸಿಕ್ಕಿಲ್ಲ.


WTC ಫೈನಲ್‌ಗೆ ಹೋಗಲು ಕೊನೆ ಅವಕಾಶ 


ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ ಕೊನೆಯ ಅವಕಾಶವಿದೆ. 4ನೇ ಟೆಸ್ಟ್ ಪಂದ್ಯವು WTC ಫೈನಲ್ ವಿಷಯದಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡವು ಈ ಪಂದ್ಯವನ್ನು ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲುವ ತವಕದಲ್ಲಿದೆ. ಇದೇ ವೇಳೆ ಇಂದೋರ್‌ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.


ಇದನ್ನೂ ಓದಿ: WPL 2023: ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಶುಭಾರಂಭ, ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ದಾಖಲೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.