IND vs BAN: ಭಾರತ-ಬಾಂಗ್ಲಾದೇಶ ಪಂದ್ಯಕ್ಕೂ ಮುನ್ನ ಸಂಚಲನ ಸೃಷ್ಟಿಸಿದ ಶಕೀಬ್ ಅಲ್ ಹಸನ್ ಹೇಳಿಕೆ!
ಒಂದೆಡೆ ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲಾ ತಂಡಗಳು ವಿಶ್ವಕಪ್ ಗೆಲ್ಲಲೇಬೇಕೆಂದು ಆಡುತ್ತಿರುವ ನಡುವೆ ಶಕೀಬ್ ನೀಡಿರುವ ಈ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ನವದೆಹಲಿ: T20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಳೆ (ನ.2) ಬಾಂಗ್ಲಾದೇಶದ ವಿರುದ್ಧ ತನ್ನ 4ನೇ ಪಂದ್ಯವನ್ನು ಆಡಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಶಾಕಿಂಗ್ ಹೇಳಿಕೆ ನೀಡಿದ್ದು, ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ಶಕೀಬ್ ಹೇಳಿದ್ದೇನು ಗೊತ್ತಾ?
ಭಾರತ ವಿರುದ್ಧದ ಪಂದ್ಯಕ್ಕೂ ಮೊದಲು ಶಕೀಬ್ ಅಲ್ ಹಸನ್ ತಮ್ಮ ತಂಡವು ಟಿ-20 ವಿಶ್ವಕಪ್ ಗೆಲ್ಲಲು ಬಂದಿಲ್ಲವೆಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ‘ನಾವು ಟಿ-20 ವಿಶ್ವಕಪ್ ಗೆಲ್ಲಲು ಇಲ್ಲಿಗೆ ಬಂದಿಲ್ಲ. ಟೀಂ ಇಂಡಿಯಾ ವಿಶ‍್ವಕಪ್ ಗೆಲ್ಲಲು ಇಲ್ಲಿಗೆ ಬಂದಿದೆ. ಬಾಂಗ್ಲಾದೇಶ ಭಾರತವನ್ನು ಸೋಲಿಸಿದರೆ ಅದು ತಿರುಗುಬಾಣವಾಗುತ್ತದೆ. ಹೀಗಾಗಿ ನಾವು ಭಾರತವನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್ ತೆಂಡೂಲ್ಕರ್
ಒಂದೆಡೆ ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲಾ ತಂಡಗಳು ವಿಶ್ವಕಪ್ ಗೆಲ್ಲಲೇಬೇಕೆಂದು ಆಡುತ್ತಿರುವ ನಡುವೆ ಶಕೀಬ್ ನೀಡಿರುವ ಈ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಸೆಮಿಫೈನಲ್ ತಲುಪುತ್ತಾ ಬ್ಲಾಂಗ್ಲಾದೇಶ?
T20 ವಿಶ್ವಕಪ್ 2022ರ ಸೂಪರ್ 12ರಲ್ಲಿ ಟೀಂ ಇಂಡಿಯಾ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿದೆ. ಬಾಂಗ್ಲಾದೇಶ ಸಹ 3 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿದೆ. ಗ್ರೂಪ್-2ರಲ್ಲಿ ಬಾಂಗ್ಲಾದೇಶ 3ನೇ ಸ್ಥಾನದಲ್ಲಿದೆ. ಆದರೆ ತಂಡಕ್ಕೆ ನೆಟ್ ರನ್ ರೇಟ್ -1.533 ಆಗಿರುವುದು ಪ್ರಮುಖ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ತಂಡವು ಸೆಮಿಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಬಹುದು. ಆದರೆ, ಬಾಂಗ್ಲಾ ತಂಡಕ್ಕೆ ಟೀಂ ಇಂಡಿಯಾವನ್ನು ಸೋಲಿಸುವುದು ಸುಲಭವಲ್ಲ. ನೆದರ್ಲೆಂಡ್ಸ್ ಮತ್ತು ಜಿಂಬಾಬ್ವೆ ಮಣಿಸುವುದರಲ್ಲಿ ಯಶಸ್ವಿಯಾಗಿರುವ ಬಾಂಗ್ಲಾ ತಂಡ ಭಾರತಕ್ಕೆ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ.
ಇದನ್ನೂ ಓದಿ: Kannadigas in Cricket: ಕ್ರಿಕೆಟ್ ಲೋಕದಲ್ಲಿಯೂ ಕನ್ನಡಿಗರ ಕಮಾಲ್: ‘ಅತ್ಯುನ್ನತ’ ಹುದ್ದೆಯಲ್ಲೂ ನಮ್ಮವರದ್ದೇ ದರ್ಬಾರ್
ಟೀಂ ಇಂಡಿಯಾದ್ದೇ ಮೇಲುಗೈ
ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ ಒಟ್ಟು 11 ಪಂದ್ಯಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ 10 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ. ಅಂಕಿಅಂಶಗಳನ್ನು ನೋಡುವುದಾದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾವೇ ಮೇಲುಗೈ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.