Team India : ಎರಡನೇ ಟಿ20ಗೆ ರೋಹಿತ್ ಗೆಳೆಯನ ದಿಢೀರ್ ಎಂಟ್ರಿ, ಇಂಗ್ಲೆಂಡ್ ತಂಡದಲ್ಲಿ ತಲ್ಲಣ!
ಮೊದಲ ಪಂದ್ಯದಲ್ಲಿ ಆಡಿದ ಕೆಲವು ಆಟಗಾರರು ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹಾಗೆ ಕೆಲ ಆಟಗಾರರು ಟೀಂಗೆ ಎಂಟ್ರಿ ನೀಡಿದ್ದಾರೆ. ಈ ಪಂದ್ಯಕ್ಕಾಗಿ, ಕ್ಯಾಪ್ಟನ್ ರೋಹಿತ್ ಶರ್ಮಾ ತನ್ನ ಆಪ್ತ ಸ್ನೇಹಿತನೊಬ್ಬ ಎಂಟ್ರಿ ನೀಡಿರುವುದು ಇಂಗ್ಲೆಂಡ್ ತಂಡದವರಿಗೆ ತಲ್ಲಣ ಸೃಷ್ಟಿಸಿದೆ.
IND vs ENG 2 ನೇ T20 : ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯ ಇಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ಆಡಿದ ಕೆಲವು ಆಟಗಾರರು ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹಾಗೆ ಕೆಲ ಆಟಗಾರರು ಟೀಂಗೆ ಎಂಟ್ರಿ ನೀಡಿದ್ದಾರೆ. ಈ ಪಂದ್ಯಕ್ಕಾಗಿ, ಕ್ಯಾಪ್ಟನ್ ರೋಹಿತ್ ಶರ್ಮಾ ತನ್ನ ಆಪ್ತ ಸ್ನೇಹಿತನೊಬ್ಬ ಎಂಟ್ರಿ ನೀಡಿರುವುದು ಇಂಗ್ಲೆಂಡ್ ತಂಡದವರಿಗೆ ತಲ್ಲಣ ಸೃಷ್ಟಿಸಿದೆ.
ಟೀಂ ಇಂಡಿಯಾಗೆ ಈ ಆಟಗಾರನ ಎಂಟ್ರಿ
ಈ ಪಂದ್ಯವನ್ನು ಗೆದ್ದು ಇಂಗ್ಲೆಂಡ್‌ನಲ್ಲಿ ಸತತ ನಾಲ್ಕನೇ ಟಿ-20 ಸರಣಿಯನ್ನು ಗೆಲ್ಲುವತ್ತ ಟೀಂ ಇಂಡಿಯಾದ ದೃಷ್ಟಿ ನೆಟ್ಟಿದೆ. ಈ ಪಂದ್ಯಕ್ಕೂ ಮುನ್ನ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಂಡಕ್ಕೆ ಎಂಟ್ರಿ ನೀಡಿದ್ದಾರೆ. ಟೆಸ್ಟ್ ಪಂದ್ಯದ ನಂತರ ಪಂತ್ ಗೆ ವಿಶ್ರಾಂತಿ ನೀಡಲಾಗಿತ್ತು, ಆದ್ದರಿಂದ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಈ ಪಂದ್ಯದ ಪ್ಲೇಯಿಂಗ್ XI ನಲ್ಲಿ ರಿಷಬ್ ಪಂತ್ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ : ತಂಡಕ್ಕೆ ಮರಳಿದ ಜಡೇಜಾ: ಈ ಆಟಗಾರನ ವೃತ್ತಿಜೀವನಕ್ಕೆ ಕುತ್ತು!
ಟೆಸ್ಟ್ ಪಂದ್ಯದಲ್ಲಿ ನಡೆದಿತ್ತು ಗಲಾಟೆ
ರಿಷಬ್ ಪಂತ್ ಇದುವರೆಗೆ ಟಿ20 ವೃತ್ತಿಜೀವನದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಸಾಧ್ಯವಾಗಿಲ್ಲ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಶತಕ ಸಿಡಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 86 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 57 ರನ್ ಗಳಿಸಿದರು. ಈ ಪಂದ್ಯದಲ್ಲಿ ಪಂತ್ ಒಟ್ಟು 203 ರನ್ ಗಳಿಸಿದ್ದರು. ಟೀಮ್ 20 ರಲ್ಲೂ ಅವರು ಇದೇ ರೀತಿಯ ಪ್ರದರ್ಶನ ನೀಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿ ಇದೆ.
ಈ ಮ್ಯಾಚ್ ಗೆ ಈ ಆಟಗಾರರೂ ಎಂಟ್ರಿ
ರಿಷಬ್ ಪಂತ್ ಹೊರತುಪಡಿಸಿ, ಅನೇಕ ಹಿರಿಯ ಆಟಗಾರರು ಈಗ ಈ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರಂತಹ ಆಟಗಾರರು ಇದ್ದಾರೆ. ಈ ಎಲ್ಲಾ ಆಟಗಾರರು ಟೆಸ್ಟ್ ಪಂದ್ಯದ ಪ್ಲೇಯಿಂಗ್ XI ನಲ್ಲಿದ್ದಾರೆ. ಈ ಆಟಗಾರರು ತಂಡಕ್ಕೆ ಬಂದ ನಂತರ, ಪ್ಲೇಯಿಂಗ್ XI ನಲ್ಲಿ ಹಲವು ಬದಲಾವಣೆಗಳಾಗಲಿವೆ, ಅದರಲ್ಲಿ ರಿಷಬ್ ಪಂತ್ ಹೆಸರು ಮೊದಲು ಬರುತ್ತದೆ.
ಇದನ್ನೂ ಓದಿ : Ind vs Eng ಎರಡನೇ ಟಿ20 ಗೆ ಸಂಪೂರ್ಣ ಬದಲಾಗಲಿದೆ ಟೀಂ ಇಂಡಿಯಾ!
ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್/ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ