ನವದೆಹಲಿ: ವಿರಾಟ್​ ಕೊಹ್ಲಿ ಟೆಸ್ಟ್​ ಸರಣಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಅ್ಯಂಡರ್ಸನ್ ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್​ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯವು ಮಾರ್ಚ್​ 7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿದೆ. ಸಂದರ್ಶವೊಂದರಲ್ಲಿ ಕೊಹ್ಲಿ ಬಗ್ಗೆ ಅ್ಯಂಡರ್ಸನ್ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. 


COMMERCIAL BREAK
SCROLL TO CONTINUE READING

ಟೆಸ್ಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ ಅ್ಯಂಡರ್ಸನ್ ಅವರು 37 ಏಕದಿನ ಪಂದ್ಯಗಳಲ್ಲಿ ಒಟ್ಟು 10 ಬಾರಿ ಕೊಹ್ಲಿಯನ್ನು ಔಟ್​ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 25 ಪಂದ್ಯಗಳಲ್ಲಿ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕೊಹ್ಲಿಯವರು ಆರಂಭಿಕ 2 ಟೆಸ್ಟ್​ ಪಂದ್ಯಗಳಿಂದ ಹಿಂದೆ ಸರಿದಿದ್ದರು. 3ನೇ ಪಂದ್ಯದಲ್ಲಿ ಅವರು ತಂಡ ಸೇರಲಿದ್ದಾರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ 3ನೇ ಪಂದ್ಯದ ಆರಂಭಕ್ಕೂ ಮುನ್ನವೇ ಕೊಹ್ಲಿ ಸರಣಿಯ ಎಲ್ಲಾ ಪಂದ್ಯಗಳಿಂದ ಹಿಂದೆ ಸರಿದಿರುವ ನಿರ್ಧಾರವನ್ನು ತಿಳಿಸಿದ್ದರು.


ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಪ್ರಿ-ವೆಡ್ಡಿಂಗ್’ನಲ್ಲಿ ಧೋನಿ ಡ್ಯಾನ್ಸ್; ಸಾಥ್ ಕೊಟ್ಟ ಪತ್ನಿ ಸಾಕ್ಷಿ, ಕ್ರಿಕೆಟಿಗ ಡ್ವೇನ್ ಬ್ರಾವೋ


WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ


ಭಾರತ ವಿರುದ್ಧದ ಅಂತಿಮ ಟೆಸ್ಟ್​ನಲ್ಲಿ ಅ್ಯಂಡರ್ಸನ್ 2 ವಿಕೆಟ್​ ಕಿತ್ತರೆ 700 ವಿಕೆಟ್‌ಗಳ ಕ್ಲಬ್‌ಗೆ ಸೇರಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 3ನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ 700 ಟೆಸ್ಟ್​ ವಿಕೆಟ್​ ಕಿತ್ತ ಸಾಧಕರಾಗಿದ್ದಾರೆ. 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅ್ಯಂಡರ್ಸನ್, 2003ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೆ ಇಂಗ್ಲೆಂಡ್​ ಪರ ಅ್ಯಂಡರ್ಸನ್ 186 ಟೆಸ್ಟ್​ ಪಂದ್ಯಗಳನ್ನು ಆಡಿದ್ದು, 698 ವಿಕೆಟ್​ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್​ ಪಡೆದ ಸಾಧನೆ ಮಾಡಿದ್ದು, 3 ಬಾರಿ 10 ವಿಕೆಟ್​ ಪಡೆದ ಸಾಧಕರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.