ನವದೆಹಲಿ: ಟೀಂ ಇಂಡಿಯಾದ ಆಟಗಾರನೊಬ್ಬ ಪ್ರತಿ ಪಂದ್ಯದಲ್ಲೂ ನಿರಂತರವಾಗಿ ವಿಲನ್ ಆಗುತ್ತಿದ್ದು, ತನ್ನ ಕಳಪೆ ಪ್ರದರ್ಶನದಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಈ ಆಟಗಾರನಿಗೆ ಅವಕಾಶ ನೀಡುವ ಸಲುವಾಗಿ ಭಾರತ ತಂಡದ ಆಡಳಿತ ಮಂಡಳಿ ಹಲವು ಪ್ರತಿಭಾವಂತ ಆಟಗಾರರಿಗೆ ಅನ್ಯಾಯ ಮಾಡುತ್ತಿದೆ. ಈ ಫ್ಲಾಪ್ ಆಟಗಾರ ಬೇರಾರೂ ಅಲ್ಲ, ಟಿ-20 ಅಂತಾರಾಷ್ಟ್ರೀಯ ಸ್ವರೂಪದಲ್ಲಿ ಸತತವಾಗಿ ವಿಫಲವಾಗುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್.


COMMERCIAL BREAK
SCROLL TO CONTINUE READING

ಪ್ರತಿ ಪಂದ್ಯದಲ್ಲೂ ವೈಫಲ್ಯ!


ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ನಿರಂತರವಾಗಿ ಕಳಪೆ ಪ್ರದರ್ಶನ ನೀಡಿದರು. ನಂತರ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಅವರ T20 ಅಂತಾರಾಷ್ಟ್ರೀಯ ವೃತ್ತಿಜೀವನ ಉಳಿಸಲು ಓಪನಿಂಗ್‌ ಆಡುವ ಅವಕಾಶ ನೀಡಿತು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯ 2ನೇ ಮತ್ತು 3ನೇ T20 ಪಂದ್ಯಗಳಲ್ಲಿ ರಿರಭ್ ಪಂತ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದರೂ ಕೇವಲ 6 ಮತ್ತು 11 ರನ್ ಗಳಿಸಿದರು.


ಇದನ್ನೂ ಓದಿ: Team India : 'ರಿಷಭ್ ಪಂತ್ ಟೀಂ ಇಂಡಿಯಾ ಓಪನರ್ ಆಗಬೇಕು'


ಕಳಪೆ ಪ್ರದರ್ಶನದಿಂದ ಅವಕಾಶಗಳು ವ್ಯರ್ಥ!


ಮಧ್ಯಮ ಕ್ರಮಾಂಕದದಿಂದ ರೋಹಿತ್ ಶರ್ಮಾಗೆ ಹೇಗೆ ಆರಂಭಿಕರಾಗಿ ಬಡ್ತಿ ನೀಡಲಾಗಿತ್ತೋ ಅದೇ ಪ್ರಯೋಗದ ಆಧಾರದ ಮೇಲೆ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಪ್ಲೇಯಿಂಗ್ 11ರಲ್ಲಿ ರಿಷಭ್ ಪಂತ್‌ಗೆ ಅವಕಾಶ ನೀಡುತ್ತಿದೆ. ಆದರೆ ಪಂತ್ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಬದಲು ನಿರಂತರವಾಗಿ ವಿಫಲರಾಗಿದ್ದಾರೆ. ಕಳೆದ 19 ಟಿ-20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಪಂತ್ ಒಂದೇ ಒಂದು ಅರ್ಧಶತಕ ಗಳಿಸಿಲ್ಲ.


ಅವಕಾಶ ನೀಡುವ ಬಗ್ಗೆ ಪ್ರಶ್ನೆ!


ಇದೀಗ ಟೀಂ ಇಂಡಿಯಾದಲ್ಲಿ ರಿಷಭ್ ಪಂತ್‍ಗೆ ಹೆಚ್ಚಿನ ಅವಕಾಶ ನೀಡಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸಂಜು ಸ್ಯಾಮ್ಸನ್‌ರಂತಹ ಪಂದ್ಯದ ಗತಿಯನ್ನೇ ಬದಲಿಬಲ್ಲ ಸ್ಫೋಟಕ ಆಟಗಾರರು ಬೆಂಚ್ ಕಾಯಬೇಕಾಗಿದೆ. ಇದೀಗ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವ ಸಮಯ ಬಂದಿದೆ. ಸಂಜು ಸ್ಯಾಮ್ಸನ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಯಾವುದೇ ಪರಿಸ್ಥಿತಿಯಲ್ಲೂ ಸಹ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಪ್ರತಿಭಾವಂತ ಆಟಗಾರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದಾರೆ. ಪಂತ್ ಬದಲು ಸಂಜುಗೆ ಅವಕಾಶ ನೀಡಬೇಕೆಂದು ಅಭಿಮಾನಿಗಳು ಆಯ್ಕೆಗಾರರಿಗೆ ಒತ್ತಾಯಿಸುತ್ತಿದ್ದಾರೆ.


ಇದನ್ನೂ ಓದಿ: IND vs NZ : ನ್ಯೂಜಿಲೆಂಡ್​​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ, ಟಿ20 ಸರಣಿ ಗೆಲ್ಲುವ ಮೂಲಕ ಮೊದಲ ದಾಖಲೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.