IND vs PAK ಟೆಸ್ಟ್ ಸರಣಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯಿಂದಾಗಿ ನಡುವೆ ದೀರ್ಘಕಾಲದವರೆಗೆ ಯಾವುದೇ ಕ್ರಿಕೆಟ್ ಸರಣಿಗಳು ನಡೆದಿಲ್ಲ. ಕಳೆದ 15 ವರ್ಷಗಳಿಂದ ಉಭಯ ತಂಡಗಳ ನಡುವೆ ಒಂದೇ ಒಂದು ಟೆಸ್ಟ್ ಪಂದ್ಯವೂ ನಡೆದಿಲ್ಲ. ಐಸಿಸಿ ಟೂರ್ನಿಗಳಲ್ಲಷ್ಟೇ ಎರಡೂ ತಂಡಗಳು ಕಣಕ್ಕಿಳಿಯುತ್ತಿವೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಭಾರತ ಮತ್ತು ಪಾಕಿಸ್ತಾನ ನಡುವಿನ ತಟಸ್ಥ ಟೆಸ್ಟ್ ಸರಣಿಯನ್ನು ಆಡಲು ಒಪ್ಪಿಕೊಂಡಿದ್ದಾರೆ. ಇದೀಗ ಟೆಸ್ಟ್ ಸರಣಿ ವಿಚಾರವಾಗಿ ಬಿಸಿಸಿಐನಿಂದ ದೊಡ್ಡ ಅಪ್ಡೇಟ್ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಭಾರತ-ಪಾಕ್ ನಡುವೆ ಟೆಸ್ಟ್ ಸರಣಿ?


ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ನಜಮ್ ಸೇಥಿ ಅವರು ಕೆಲವು ದಿನಗಳ ಹಿಂದೆ ತಟಸ್ಥ ಸ್ಥಳದಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು ಆಡುವ ಆಲೋಚನೆಯನ್ನು ಪ್ರಸ್ತಾಪಿಸಿದ್ದರು. ಆದರೆ ಈ ವಿಷಯದ ಬಗ್ಗೆ ಬಿಸಿಸಿಐ ಮೂಲವು, ‘ನಮ್ಮಲ್ಲಿ ಅಂತಹ ಯಾವುದೇ ಯೋಜನೆಗಳಿಲ್ಲ ಅಥವಾ ಮುಂದಿನ ದಿನಗಳಲ್ಲಿ ನಡೆಯಲ್ಲ. ಏಕೆಂದರೆ ನಾವು ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ದ್ವಿಪಕ್ಷೀಯ ಸರಣಿಗಳನ್ನು ಆಡಲು ಸಿದ್ಧರಿಲ್ಲ’ವೆಂದು ಹೇಳಿದೆ.


ಇದನ್ನೂ ಓದಿ: Arjun Tendulkar: ಅರ್ಜುನ್ ತೆಂಡೂಲ್ಕರ್ ಮೇಲೆ ನಾಯಿ ದಾಳಿ: ಸ್ವಲ್ಪದರಲ್ಲೇ ಪಾರಾದ ಸಚಿನ್ ಪುತ್ರನ ಭವಿಷ್ಯ!


ನಜಮ್ ಸೇಥಿಯಿಂದ ದೊಡ್ಡ ಹೇಳಿಕೆ


ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCBಬಿ) ಅಧ್ಯಕ್ಷ ನಜಮ್ ಸೇಥಿ ಅವರು, ‘ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ದ್ವಿಪಕ್ಷೀಯ ಟೆಸ್ಟ್ ಪಂದ್ಯಗಳನ್ನು ಆಡಬಹುದು ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯನ್ ಕ್ರೀಡಾಂಗಣ ಉತ್ತಮವಾಗಿರುತ್ತದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಳಗೊಂಡ ದ್ವಿಪಕ್ಷೀಯ ಟೆಸ್ಟ್ ಸರಣಿಗೆ ತಾನು ಮುಕ್ತನಾಗಿದ್ದೇನೆ ಎಂದು ಸೇಥಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.


ಕೊನೆಯದಾಗಿ 2012ರಲ್ಲಿ ಸರಣಿ


ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ನಿರಂತರ ಉದ್ವಿಗ್ನತೆ ಇದೆ. 2012ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕೊನೆಯದಾಗಿ ಸರಣಿ ಆಡಲಾಯಿತು. ನಂತರ ಪಾಕಿಸ್ತಾನವು ಭಾರತಕ್ಕೆ ಪ್ರವಾಸ ಮಾಡಿತು. ಎರಡೂ ತಂಡಗಳ ನಡುವೆ 3 T20 ಮತ್ತು ODI ಸರಣಿಗಳನ್ನು ಆಡಲಾಯಿತು. ಅಂದಿನಿಂದ ಈ ಎರಡೂ ದೇಶಗಳು ಮುಖಾಮುಖಿಯಾಗಿಲ್ಲ. ಎರಡೂ ದೇಶಗಳು ಪ್ರತಿಯೊಂದು ಐಸಿಸಿ ಟೂರ್ನಿಗಳಲ್ಲಿ ಮುಖಾಮುಖಿಯಾಗಿವೆ.


ಇದನ್ನೂ ಓದಿ: Sourav Ganguly security: ಸೌರವ್ ಗಂಗೂಲಿಗೆ ‘Z’ ಕೆಟಗರಿ ಭದ್ರತೆ ನೀಡಿದ ಸರ್ಕಾರ! ಕಾರಣ ಏನುಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.