ಟೆಸ್ಟ್’ನಲ್ಲಿ ವಿರಾಟ್ ವಿಕೆಟ್ ಕಿತ್ತ ಈ ಆಟಗಾರನ ತೂಕ 143 ಕೆಜಿ! ದೈತ್ಯ ಕ್ರಿಕೆಟಿಗ ವಿಂಡೀಸ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?
Who is Rahkeem Cornwall? ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ದೈತ್ಯ ಆಟಗಾರ ಎಂದು ಕರೆಯಲ್ಪಟ್ಟಿರುವ ರಹಕೀಮ್ ಕಾರ್ನ್‌ವಾಲ್ ವಿರಾಟ್ ಕೊಹ್ಲಿ ಅವರ ವಿಕೆಟ್ ಕಬಳಿಸಿದ್ದರು.
Who is Rahkeem Cornwall: ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಭಾರತ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ನಾಯಕ ರೋಹಿತ್ ಶರ್ಮಾ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಬೌಲರ್ ಆರ್ ಅಶ್ವಿನ್ ಅಮೋಘವಾಗಿ ಆಟವಾಡಿದ್ದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಜಾರಿ: ಫಲಾನುಭವಿಗಳು ಯಾರು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ರಹಕೀಮ್ ಕಾರ್ನ್‌ವಾಲ್ ವಿಶ್ವದ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ದೈತ್ಯ ಆಟಗಾರ ಎಂದು ಕರೆಯಲ್ಪಟ್ಟಿರುವ ರಹಕೀಮ್ ಕಾರ್ನ್‌ವಾಲ್ ವಿರಾಟ್ ಕೊಹ್ಲಿ ಅವರ ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ, ಜೈಸ್ವಾಲ್ ಬ್ಯಾಟಿಂಗ್ ಗೆ ಸಹ ಸಿಂಹಸ್ವಪ್ನವಾಗಿ ಕಾಡಿದ್ದರು.
ರಹಕೀಮ್ ಕಾರ್ನ್‌ವಾಲ್ ಒಬ್ಬ ಸ್ಪಿನ್ ಬೌಲರ್. ಆದರೆ ಇವರು ಬೌಲಿಂಗ್ ಮಾಡುವಾಗ ಉಸಿರಾಟದ ತೊಂದರೆಯನ್ನು ಎದುರಿಸಿದ್ದರು. ವೈದ್ಯಕೀಯ ತಂಡ ಬಂದು ತಪಾಸಣೆ ನಡೆಸಿ, ಒಂದಷ್ಟು ಔಷಧವನ್ನೂ ಕೊಟ್ಟರೂ ಸಹ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ರಹಕೀಮ್ ಕಾರ್ನ್ವಾಲ್ ಕೇವಲ 11 ಓವರ್ ಬೌಲಿಂಗ್ ಮಾಡಿ, ನಂತರ ಮೈದಾನದಿಂದ ಹೊರನಡೆದಿದ್ದರು.
ಇನ್ನು ರಹಕೀಮ್ ಕಾರ್ನ್‌ವಾಲ್ ಅವರ ದೇಹದ ತೂಕ ಬರೋಬ್ಬರಿ 140 ಕೆಜಿ. ಫಿಟ್ನೆಸ್ ಮಂತ್ರ ಪಠಿಸುವ ಕ್ರಿಕೆಟ್ ಲೋಕದಲ್ಲಿ ಇಷ್ಟು ತೂಕದ ವ್ಯಕ್ತಿ ಹೇಗೆ ಪ್ರವೇಶ ಪಡೆದರು ಎಂಬುದೇ ಅನೇಕರ ಸಂಶಯ.
ತನ್ನ ದೇಹದ ತೂಕದ ಬಗ್ಗೆ ಈ ಹಿಂದೆ ರಕೀಮ್ ಕಾರ್ನ್‍ವಾಲ್ ಮಾತಾಡಿದ್ದರು. “ನನ್ನ ದೇಹದ ರಚನೆಯನ್ನು ನನ್ನಿಂದ ಬದಲಿಸಲು ಸಾಧ್ಯವಿಲ್ಲ. ನಾನು ದೈತ್ಯನಂತೆ ಕಂಡರೂ ಫಿಟ್ ಆಗಿರಲು ಬಯಸುತ್ತೇನೆ. ನನ್ನ ಆಟ ಮಾತನಾಡುವಂತೆ ಮಾಡುತ್ತೇನೆ” ಎಂದು ಹೇಳಿದ್ದರು.
2019ರಲ್ಲಿ ಭಾರತ ತಂಡದ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ನ ಲ್ಲಿ ರಕೀಮ್ ಕಾರ್ನ್‍ವಾಲ್ ಪಾದಾರ್ಪಣೆ ಮಾಡಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ದೇಹದ ತೂಕದ ಆಟಗಾರ ಎಂದು ಗುರುತಿಸಲ್ಪಟ್ಟಿದ್ದಾರೆ. ಇನ್ನು ರಕೀಮ್ ಸ್ಪಿನ್ನರ್ ಜೊತೆ ಬ್ಯಾಟ್ಸ್‍ಮನ್ ಕೂಡ ಹೌದು.
ಇದನ್ನೂ ಓದಿ: “ವಿಶ್ವಕಪ್ ಪಂದ್ಯದಲ್ಲಿ ಭಾರತದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ”: ಪಾಕ್ ಆಟಗಾರ
ವೆಸ್ಟ್ ಇಂಡೀಸ್ ದೈತ್ಯ ಆಲ್‍ರೌಂಡರ್ ರಕೀಮ್ ಕಾರ್ನ್‍ವಾಲ್ ಅವರ ದೇಹದ ತೂಕ 143 ಕೆ.ಜಿ, ಎತ್ತರ 6.8 ಅಡಿ. ರಕೀಮ್ ಕಾರ್ನ್‍ವಾಲ್ ಇದುವರೆಗೆ ವೆಸ್ಟ್ ಇಂಡೀಸ್ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ರನ್ ಮತ್ತು 35 ವಿಕೆಟ್‍ಗಳನ್ನು ಕಬಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ