IND vs WI: ಟೆಸ್ಟ್ ಸರಣಿಯಲ್ಲಿ ಮಹಾ ಬದಲಾವಣೆ: ಈ ಇಬ್ಬರು ಹೊಸ ಮುಖಗಳಿಗೆ ಆರಂಭಿಕ ಸ್ಥಾನ ನೀಡಿದ ಸಮಿತಿ!
India vs West Indies: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ (WTC Final-2023) ಫೈನಲ್ ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಭಾರೀ ಪ್ರಶ್ನೆಗಳು ಭುಗಿಲೆದ್ದವು
India vs West Indies, Opening Slot: ಭಾರತ ತಂಡ ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಆಡಲಿದ್ದು, ಇದು 2 ಟೆಸ್ಟ್ ಪಂದ್ಯಗಳೊಂದಿಗೆ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಸೀಮಿತ ಓವರ್ ಗಳ ಸರಣಿಯನ್ನೂ ಆಡಲಿದೆ. ಈ ಮಧ್ಯೆ ಭಾರತೀಯ ಆಯ್ಕೆದಾರರು ಟೆಸ್ಟ್ ಮಾದರಿಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬಹುದು ಎಂಬ ವರದಿಗಳಿವೆ.
ಇದನ್ನೂ ಓದಿ: ಮುಂದಿನ 49 ದಿನಗಳಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ! ಲಕ್ಷ್ಮೀ ಕೃಪೆಯಿಂದ ಗೌರವ-ಖ್ಯಾತಿ ಹೆಚ್ಚಲಿದೆ…
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ (WTC Final-2023) ಫೈನಲ್ ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಭಾರೀ ಪ್ರಶ್ನೆಗಳು ಭುಗಿಲೆದ್ದವು. ಆ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತರಾತುರಿಯಲ್ಲಿ ಪ್ರತಿಕ್ರಿಯಿಸದೆ, ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಯಾವುದೇ ಬಿಕ್ಕಟ್ಟು ಇಲ್ಲ ಆದರೆ ಟೆಸ್ಟ್ ಸ್ವರೂಪದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು ಎಂಬಂತೆ ಹೇಳಿಕೆ ನೀಡಿತು. ಈ ಸಂದರ್ಭದಲ್ಲಿ ಇಬ್ಬರು ಆಟಗಾರರ ಭವಿಷ್ಯಕ್ಕೆ ಟೀಂ ಇಂಡಿಯಾದಲ್ಲಿ ದಾರಿ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಈ ಇಬ್ಬರು ಯುವ ಬ್ಯಾಟ್ಸ್‌ಮನ್ ಗಳಿಗೆ ಅವಕಾಶ ಸಿಗುತ್ತಾ?
ವೆಸ್ಟ್ ಇಂಡೀಸ್ ವಿರುದ್ಧದ 2-ಟೆಸ್ಟ್ ಸರಣಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬರುವುದಿಲ್ಲ, ಆದರೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರಿಗೆ ಬಡ್ತಿ ನೀಡುವುದು ಖಚಿತ. ಇವೆರಡೂ ಭಾರತೀಯ ಟೆಸ್ಟ್ ತಂಡದ ಯೋಜನೆಗಳ ಭಾಗವಾಗಿದೆ. ಫಾರ್ಮ್ ನಲ್ಲಿರುವ ಓಪನರ್ ಗಳನ್ನು ಟೆಸ್ಟ್ ಮಾದರಿಯಲ್ಲಿ ಶೀಘ್ರದಲ್ಲೇ ಕಣಕ್ಕಿಳಿಸಬಹುದು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪ್ರಸ್ತುತ ಜುಲೈ 12 ರಿಂದ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಟ್ರಿನಿಡಾಡ್ ಮತ್ತು ಡೊಮಿನಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ಭಾರತೀಯ ಆಯ್ಕೆದಾರರು ಯುವ ಮತ್ತು ಅನುಭವದ ಸಮತೋಲನ ಹೊಂದಿರುವ ಆಟಗಾರರನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಸರಣಿಯು 2023-2025 WTC ಚಕ್ರದ ಭಾಗವಾಗಿರುತ್ತದೆ. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಬಹುತೇಕ ಒಂದೇ ವಯಸ್ಸಿನವರಾಗಿರುವುದರಿಂದ, ಅವರ ಜೊತೆಗೆ ಯುವ ಆಟಗಾರರನ್ನು ಸಹ ಕಣಕ್ಕಿಳಿಸಬಹುದು,
ಇನ್ ಫಾರ್ಮ್ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರಿತುರಾಜ್ ಗಾಯಕ್ವಾಡ್ ಅವರನ್ನು ದುಲೀಪ್ ಟ್ರೋಫಿಗಾಗಿ ಪಶ್ಚಿಮ ವಲಯ ತಂಡಕ್ಕೆ ಆಯ್ಕೆಗಾರರು ಆಯ್ಕೆ ಮಾಡಿದ್ದಾರೆ. ಈ ಟೂರ್ನಿ ಜೂನ್ 28 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ರಿತುರಾಜ್ ಗಾಯಕ್ವಾಡ್ ಬಗ್ಗೆ ಮಾತನಾಡುವುದಾದರೆ, ಅವರು ಪ್ರಸ್ತುತ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ 2023 (ಎಂಪಿಎಲ್ 2023) ನಲ್ಲಿ ಪುಣೆ ಪರ ಆಡುತ್ತಿದ್ದಾರೆ. IPL-2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ರಿತುರಾಜ್ ಎರಡನೇ ಅತಿ ಹೆಚ್ಚು ರನ್ ಗಳಿಸಿದ (16 ಪಂದ್ಯಗಳಲ್ಲಿ 590) ಆಟಗಾರ ಎನಿಸಿಕೊಂಡರು. ಎಂ ಎಸ್ ಧೋನಿ ನಾಯಕತ್ವದ ಈ ತಂಡ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ಬರೆದಿದೆ. ಈ ಅವಧಿಯಲ್ಲಿ ಗಾಯಕ್ವಾಡ್ 4 ಅರ್ಧಶತಕಗಳನ್ನು ಗಳಿಸಿದರು. ಜುಲೈ 2021 ರಲ್ಲಿ, ರಿತುರಾಜ್ ಗಾಯಕ್ವಾಡ್ ಶ್ರೀಲಂಕಾ ವಿರುದ್ಧ ಟಿ 20 ನಲ್ಲಿ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಭಾರತ ಪರ ಇದುವರೆಗೆ 9 ಟಿ20 ಹಾಗೂ ಒಂದು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: 1 ವರ್ಷದ ನಂತರ ಬದಲಾಗಲಿದೆ ಈ ರಾಶಿಗಳ ಲಕ್! ಹೆಜ್ಜೆಯಿಟ್ಟಲ್ಲೆಲ್ಲಾ ಸಾಟಿಯಿಲ್ಲದ ಯಶಸ್ಸು-ಸೂರ್ಯದೃಷ್ಟಿಯೇ ಇವರಿಗೆ ಸಂಪತ್ತು
ಮತ್ತೊಂದೆಡೆ 21 ವರ್ಷದ ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರಲ್ಲಿ 625 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆದರು. 625 ರನ್, ಸರಾಸರಿ 48.08, 6 ಐವತ್ತು ಪ್ಲಸ್ ಸ್ಕೋರ್‌ಗಳು, 82 ಬೌಂಡರಿ ಮತ್ತು 26 ಸಿಕ್ಸರ್‌ಗಳನ್ನು ಬಾರಿಸಿ, ರಾಜಸ್ಥಾನ ರಾಯಲ್ಸ್ ನ ಅಗ್ರಸ್ಥಾನಿಯಾದರು. ಯಶಸ್ವಿ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ