ನವದೆಹಲಿ: IND W vs SA W - ಭಾರತೀಯ ಮಹಿಳಾ ಕ್ರಿಕೆಟ್ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಭಾನುವಾರ ಮತ್ತೊಂದು ಗರಿಯನ್ನು (Mithali Raj New Record) ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಹೌದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಕರಿಯರ್ ನಲ್ಲಿ 7000 ರನ್ಸ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗ ಅವರು ಪಾತ್ರರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಲಖನೌನಲ್ಲಿರುವ ಎಕಾನ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅವರು ಈ ಗುರಿ ಸಾಧಿಸಿದ್ದಾರೆ. ಭಾರತಕ್ಕಾಗಿ ತನ್ನ 213 ನೇ ಏಕದಿನ ಪಂದ್ಯ ಆಡುತ್ತಿರುವ ಅವರು ಭಾನುವಾರ ತಮ್ಮ 26 ನೇ ಓಟವನ್ನು ಪೂರ್ಣಗೊಳಿಸಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. 38 ವರ್ಷ ವಯಸ್ಸಿನ ಮಿಥಾಲಿ (Mithali Raj) ಈಗಾಗಲೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಸ್ ಗಳಿಸಿದ ವಿಶ್ವದ ಎರಡನೇ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾಳೆ.  


ಇದನ್ನೂ ಓದಿ-IND W vs SA W: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ Mithali Raj


ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ನ (Women Cricket)ಎಲ್ಲಾ ಫಾರ್ಮ್ಯಾಟ್ ಗಳಲ್ಲಿ 10000 ರನ್ಸ್ ಗಳಿಸಿದ ಭಾರತದ ಮೊದಲ ಮತ್ತು ವಿಶ್ವದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ ಮಿಥಾಲಿ ಪಾತ್ರರಾಗಿದ್ದಾರೆ. ಮಾಜಿ ಇಂಗ್ಲೆಂಡ್ ತಂಡದ ನಾಯಕಿ ಶಾರ್ಲೆಟ್ ಎಡ್ವರ್ಡ್ ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿದ್ದಾಳೆ. ಶಾರ್ಲೆಟ್ ತಮ್ಮ ವೃತ್ತಿಜೀವನದಲ್ಲಿ ಕ್ರಿಕೆಟ್ (Cricket News In Kannada) ನ ಎಲ್ಲಾ ಫಾರ್ಮ್ಯಾಟ್ ಗಳಲ್ಲಿ 10273 ರನ್ಸ್ ಗಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ- ವಿಭಿನ್ನ ಗೆಟ್‍ ಅಪ್‍ನಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್.!ಇವರು ಯಾರು ಬಲ್ಲಿರೇನು..?


4 ನೇ ODI ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡ ಭಾರತಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ನೀಡಿದೆ. ತಂಡದ ಆರಂಭಿಕ ಆಟಗಾರ್ತಿ  ಜೆಮಿಯಾ ರೋಡ್ರಿಗಸ್ ಅವರನ್ನು ಭಾರತದ ತನ್ನದ ಈಗಾಗಲೇ ಕೈಬಿಟ್ಟಿದೆ. ಸಣ್ಣ ಗಾಯದ ಕಾರಣ ಜುಲಾನ್ ಗೋಸ್ವಾಮಿ ಅವರಿಗೂ ಕೂಡ ವಿಶ್ರಾಂತಿ ನೀಡಲಾಗಿದೆ. ಇದರರ್ಥ ಪ್ರಿಯಾ ಪುನಿಯಾ ಅವರಿಗೆ ಸರಣಿಯಲ್ಲಿ ಪಂದ್ಯ ಓಪನ್ ಮಾಡಲು ಸಿಕ್ಕ ಇದು ಮೊದಲ ಅವಕಾಶವಾಗಿದೆ.


ಇದನ್ನೂ ಓದಿ-ಐಪಿಎಲ್ 2022 ರಲ್ಲಿ ಬರಲಿವೆ ಎರಡು ನೂತನ ತಂಡಗಳು..ಹರಾಜಿಗೆ ಮಹೂರ್ತ ಫಿಕ್ಸ್...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.