ನವದೆಹಲಿ: ಶುಕ್ರವಾರ ಪುಣೆಯಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ 20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನಂತರ ಭಾರತ ಆರು ವಿಕೆಟ್‌ಗೆ 201 ರನ್ ಗಳಿಸಿತು. 


COMMERCIAL BREAK
SCROLL TO CONTINUE READING

ಓಪನರ್‌ಗಳಾದ ಕೆ.ಎಲ್.ರಾಹುಲ್ (36 ಎಸೆತಗಳಲ್ಲಿ 54) ಮತ್ತು ಶಿಖರ್ ಧವನ್ (36 ರಲ್ಲಿ 52) 10.5 ಓವರ್‌ಗಳಲ್ಲಿ 97 ರನ್ ಸೇರಿಸಿದರು. 



ಮನೀಶ್ ಪಾಂಡೆ 18 ಎಸೆತಗಳಲ್ಲಿ 31 ರನ್ ಗಳಿಸಿದರು ಮತ್ತು ನಾಯಕ ವಿರಾಟ್ ಕೊಹ್ಲಿ ಆರನೇ ಕ್ರಮಾಂಕದಲ್ಲಿ 17 ಎಸೆತಗಳಲ್ಲಿ 26 ರನ್ ಗಳಿಸಿದರು. ಶಾರ್ದುಲ್ ಠಾಕೂರ್ ಅವರು ತಮ್ಮ ಎಂಟು ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ಭಾರತ ತಂಡವು  200  ರನ್ ಗಳ ಗಡಿ ದಾಟುವಂತೆ ಮಾಡಿದರು.


ಭಾರತ ತಂಡವು ನೀಡಿದ 202 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸುವ ಮೂಲಕ 123 ರನ್ ಗಳಿಗೆ ಸರ್ವಪತನ ಕಂಡಿತು. ಆ ಮೂಲಕ ಮೂರನೇ ಟಿ20  ಪಂದ್ಯವನ್ನು 78 ರನ್ ಗಳ ಅಂತರದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.