ನವದೆಹಲಿ: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಐತಿಹಾಸಿಕ ಹೊನಲು ಬೆಳಕಿನ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಇನ್ನಿಂಗ್ಸ್ ಸಹಿತ 46 ರನ್ ಗಳ ಅಂತರದಿಂದ ಗೆಲುವನ್ನು ಸಾಧಿಸಿದೆ.



COMMERCIAL BREAK
SCROLL TO CONTINUE READING

ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಅವರ ಭರ್ಜರಿ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿಯವರ ಶತಕದ ನೆರವಿನಿಂದಾಗಿ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.ಆ ಮೂಲಕ ಈಗ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡವು ಅಪರೂಪದ ವಿಶ್ವದಾಖಲೆಯನ್ನು ನಿರ್ಮಿಸಿದೆ.ಅದೇನಪ್ಪಾ ಅಂದರೆ ತಂಡವೊಂದು ಸತತ ನಾಲ್ಕು ಇನಿಂಗ್ಸ್ ಸಹಿತ ಗೆಲುವನ್ನು ಸಾಧಿಸಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.



ಒಟ್ಟಾರೆಯಾಗಿ ಭಾರತ ತಂಡ ಈಗ ಸತತ ನಾಲ್ಕು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಶಿಪ್ ನಲ್ಲಿ ತನ್ನ ಅಗ್ರ ಪಾರುಪತ್ಯವನ್ನು ಮುಂದುವರೆಸಿದೆ. ಬಾಂಗ್ಲಾದೇಶದ ಪರವಾಗಿ ಮುಷ್ಪಿಕರ್ ರಹಿಮ್ ಅವರು ಅರ್ಧ ಶತಕ(74) ಯಾರೂ ಕೂಡ 50 ರ ಗಡಿ ತಲುಪಲಿಲ್ಲ.ಇನ್ನು ಭಾರತ ತಂಡದ ಪರವಾಗಿ ಮಾರಕ ಬೌಲಿಂಗ್ ನಡೆಸಿದ ಉಮೇಶ್ ಯಾದವ್ 5, ಇಶಾಂತ್ ಶರ್ಮಾ 4 ವಿಕೆಟ್ ಗಳನ್ನು ಪಡೆಯುವ ಮೂಲಕ ಬಾಂಗ್ಲಾದೇಶದ ಬ್ಯಾಟ್ಸಮನ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು.