ನವದೆಹಲಿ: ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರ ಪೆಟಾ 2019 ರ ಭಾರತದ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ಪ್ರಾಣಿ ಹಕ್ಕುಗಳ ನಿರಂತರ ಬೆಂಬಲಿಗರಾಗಿದ್ದಾರೆ.ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ 1960 ರ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕಾಯ್ದೆ ನವೀಕರಿಸಲು ಕೋಟಾ ಪೆಟಾ ಇಂಡಿಯಾಕ್ಕೆ ಸಹಾಯ ಮಾಡುತ್ತಿದ್ದಾರೆ.


'ವಿರಾಟ್ ಕೊಹ್ಲಿ ಪ್ರಾಣಿ ಹಕ್ಕುಗಳ ಪ್ರತಿಪಾದಕರಾಗಿದ್ದು, ಅವರು ಪ್ರಾಣಿಗಳ ಮೇಲೆ ಯಾವುದೇ ರೀತಿಯಲ್ಲಿ ಕ್ರೌರ್ಯವನ್ನು ಸಹಿಸುವುದಿಲ್ಲ. ಪೆಟಾ ಇಂಡಿಯಾ ಪ್ರತಿಯೊಬ್ಬರನ್ನು ಕೊಹ್ಲಿ ಅವರ ನಡೆಯನ್ನು ಅನುಸರಿಸಲು ಪ್ರೋತ್ಸಾಹಿಸುತ್ತದೆ ಮತ್ತು ಯಾವಾಗಲೂ ಅಗತ್ಯವಿರುವ ಪ್ರಾಣಿಗಳ ಪರ ವಕೀಲರಾಗಿರಬೇಕು" ಎಂದು ಪೆಟಾ ಇಂಡಿಯಾ ಸಚಿನ್ ಬಂಗೇರಾ ತಿಳಿಸಿದ್ದಾರೆ.


ಈ ಹಿಂದೆ ಡಾ.ಶಶಿ ತರೂರ್, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ಪಣಿಕರ್ ರಾಧಾಕೃಷ್ಣನ್, ಮತ್ತು ನಟಿ ಅನುಷ್ಕಾ ಶರ್ಮಾ, ಸನ್ನಿ ಲಿಯೋನ್, ಸೋನಮ್ ಕಪೂರ್, ಕಪಿಲ್ ಶರ್ಮಾ, ಹೇಮಾ ಮಾಲಿನಿ, ಆರ್ ಮಾಧವನ್, ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರು ಪೆಟಾ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.