ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿ, ದಕ್ಷಿಣ ಆಫ್ರಿಕಾಗೆ ಮತ್ತೆ  ಸರಣಿ ಸೋಲಿನ ನೋವನ್ನು ತೋರಿಸಿದೆ. ಕಳೆದ ಟಿ20 ಪಂದ್ಯದಲ್ಲೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದ ಭಾರತ, ಈ ಸಲವೂ ಸರಣಿ ವಶಪಡಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: MRF T20I Rankingನಲ್ಲಿ ಮಹತ್ವದ ಹೆಜ್ಜೆ ಇಟ್ಟ ಟೀಂ ಇಂಡಿಯಾ ಮಹಿಳಾ ಪಡೆ: ಈ ಸಾಧನೆ ಕಂಡರೆ ಹೆಮ್ಮೆಯಾಗುತ್ತೆ


ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ 27.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 99 ರನ್ ಬಾರಿಸಿತ್ತು. ಟೀಂ ದಕ್ಷಿಣ ಆಫ್ರಿಕಾ ಶತಕ ದಾಟುವಲ್ಲಿಯೂ ವಿಫಲತೆ ಕಂಡುಬಂದಿತ್ತು. ಇನ್ನು ಗೆಲುವಿನ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 19.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 105 ರನ್ ಕಲೆ ಹಾಕಿ ಸರಣಿ ಕೈವಶ ಮಾಡಿಕೊಂಡಿತು.


ಸೌತ್ ಆಫ್ರಿಕಾ ಪರ ಕಣಕ್ಕಿಳಿದ ಜನ್ನೇಮನ್ ಮಲನ್ 15 ರನ್, ಕ್ವಿಂಟನ್ ಡಿ ಕಾಕ್ 6 ರನ್, ರೀಜಾ ಹೆನ್ರಿಕ್ 3 ರನ್, ಏಡನ್ ಮರ್ಕ್ರಮ್ 9 ರನ್, ಹೆನ್ರಿಚ್ ಕ್ಲಾಸೆನ್ 34 ರನ್, ಡೇವಿಡ್ ಮಿಲ್ಲರ್ 7 ರನ್, ಆಂಡ್ಲಿಕ್ ಫೆನ್ಲುಕ್ವಾಯೋ 5 ರನ್, ಮಾರ್ಕೋ ಜಾನ್ಸೇನ್ 14 ರನ್, ಜಾರ್ನ್ ಫಾರ್ಟುನ್ 1 ರನ್, ಅನ್ರಿಚ್ ನೋರ್ಟಜೆ ಶೂನ್ಯಕ್ಕೆ ಔಟ್ ಆದರೆ ಲುಂಗಿ ಎನ್ಗಿಡಿ ಕ್ರೀಸ್ ಗೆ ಆಗಮಿಸಿದ ರನ್ ಕಲೆ ಹಾಕದೆ ಹಾಗೆಯೇ ಉಳಿದಿದ್ದಾರೆ.


ಭಾರತ ಪರ ಅಬ್ಬರಿಸಿದ ಕುಲ್ದೀಪ್ ಯಾದವ್ 18 ರನ್ ಗೆ ಬರೋಬ್ಬರಿ 4 ವಿಕೆಟ್ ಕಬಳಿಸಿದ್ದಾರೆ. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಮತ್ತು ಶಹ್ಬಾಜ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: BCCI New President : ಬಿಸಿಸಿಐ ನೂತನ ಅಧ್ಯಕ್ಷನಾಗಿ ಕನ್ನಡಿಗ ರೋಜರ್ ಬಿನ್ನಿ..!


ಆ ಬಳಿಕ ಗೆಲುವಿನ ಕಡೆ ಮುಖ ಮಾಡಲು ಕ್ರೀಸ್ ಗೆ ಇಳಿದ ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಭ್ಮನ್ ಗಿಲ್ ಅಂಗಣದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದರು. ಆದರೆ ಶಿಖರ್ ಕೇವಲ 8 ರನ್ ಬಾರಿಸಿ ಔಟ್ ಆದರು. ಇನ್ನು ಈ ಬಳಿಕ ಅಂಗಣಕ್ಕೆ ಇಳಿದಿದ್ದು, ಇಶಾನ್ ಕಿಶನ್. ಶುಭ್ಮನ್ ಮತ್ತು ಕಿಶನ್ ಜೊತೆಯಾಟದಲ್ಲಿ ಟೀಂ ಇಂಡಿಯಾ ಗೆಲುವಿನ ಕಡೆ ಮುಖ ಮಾಡಿತ್ತು. ಆದರೆ ಈ ವೇಳೆಗೆ ಇಶಾನ್ ಕಿಶನ್ 10 ರನ್ ಬಾರಿಸಿ ಔಟ್ ಆದರು. ಆ ಬಳಿಕ ಮೈದಾನಕ್ಕಿಳಿದ  ಶ್ರೇಯಸ್ ಅಯ್ಯರ್ ಅಜೇಯ 28 ರನ್ ಬಾರಿಸಿದರು. ಆದರೆ ಕೊನೆ ಕ್ಷಣದಲ್ಲಿ ಅರ್ಧ ಶತಕ ತಪ್ಪಿಸಿಕೊಂಡ ಶುಭ್ಮನ್ ಗಿಲ್ 49 ರನ್ ಬಾರಿಸಿ ಔಟ್ ಆದರು. ಆ ಬಳಿಕ ಸಂಜು ಸ್ಯಾಮ್ಸನ್ ಅಂಗಣಕ್ಕೆ ಆಗಮಿಸಿ 2 ರನ್ ಬಾರಿಸಿ ಅಜೇಯರಾಗಿ ಉಳಿದರು. ಒಟ್ಟಾರೆ ಟೀಂ ಇಂಡಿಯಾ 105 ರನ್ ಕಲೆ ಹಾಕಿ ಭರ್ಜರಿ ಗೆಲುವು ಸಾಧಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.