ಮ್ಯಾಂಚೆಸ್ಟರ್: ಇಂಗ್ಲೆಂಡ್​​ನ ಮ್ಯಾಂಚೆಸ್ಟರ್​​ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 


COMMERCIAL BREAK
SCROLL TO CONTINUE READING

ಮೊದಲು ಟಾಸ್ ಗೆದ್ದು ಫೀಲ್ಡಿಂಗ್  ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕುಲ್ದೀಪ್ ಯಾದವ್ ಸ್ಪಿನ್ ದಾಳಿ ನೆರವಾಯಿತು. ಕುಲ್ದೀಪ್ ಅವರ ಸ್ಪಿನ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಮುಖಮಾಡಿದರು. ನಿಗದಿತ 20 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ, ಭಾರತಕ್ಕೆ 160ರನ್ ಗಳ ಗುರಿ ನೀಡಿತು. 


160 ರನ್ ಗಳ ಸಾಧಾರಣ ಮೊತ್ತದ ಬೆನ್ನತ್ತಿದ್ದ ಟೀಂ ಇಂಡಿಯಾ 18. 2 ಓವರ್ ಗಳಲ್ಲಿ  2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಶಿಖರ್ ಧವನ್ ಮೊದಲ ಓವರ್​​ನಲ್ಲೇ ಕೇವಲ 4 ರನ್​ಗಳಿಸಿ ಔಟ್ ಆದರು. ಬಳಿಕ ರೋಹಿತ್ ಜೊತೆಗೂಡಿದ ಕನ್ನಡಿಗ ಕೆ. ಎಲ್. ರಾಹುಲ್ ಅವರು ಸ್ಪೋಟಕ ಆಟಕ್ಕೆ ಮುಂದಾದರು. ಸಿಡಿಲಬ್ಬರದ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಇಂಗ್ಲೆಂಡ್ ಬೌಲರ್​​ಗಳ ಬೆವರಿಳಿಸಿದರು. ರೋಹಿತ್ ಗೆ ರಾಹುಲ್ ಉತ್ತಮ ಸಾತ್ ನೀಡಿದರು. ರೋಹಿತ್ ಶರ್ಮಾ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 32 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ನಾಯಕ ವಿರಾಟ್ ಕೊಹ್ಲಿ ಜತೆಗೂಡಿದ ರಾಹುಲ್ ತಮ್ಮ ಅಬ್ಬರದ ಆಟವನ್ನು ಮುಂದುವರಿಸಿ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಭಾರತ ಇನ್ನು 10 ಬೌಲ್ ಬಾಕಿ ಇರುವಾಗಲೇ ಗೆಲುವು ಸಾಧಿಸಿತು. 


ಸ್ಕೋರ್ ವಿವರ: ಇಂಗ್ಲೆಂಡ್ ತಂಡ (159/8) ಜೋಸ್ ಬಟ್ಲರ್ 69, ಜಾಸನ್ ರಾಯ್ 30, ಕುಲ್ದೀಪ್ ಯಾದವ್ 5/24
ಭಾರತ ತಂಡ- (163/2) ಕೆಎಲ್ ರಾಹುಲ್ 101 ರನ್ ಔಟ್, ರೋಹಿತ್ ಶರ್ಮಾ 32, ವಿರಾಟ್ ಕೊಹ್ಲಿ 20 ನಾಟ್ ಔಟ್