Most ODI wins as Captain for India against Pakistan: ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾವನ್ನು ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯ ನಾಯಕನ ದೊಡ್ಡ ಕನಸುಗಳಲ್ಲಿ ಒಂದಾಗಿರುತ್ತದೆ. ಕ್ರಿಕೆಟ್ ಲೋಕದಲ್ಲಿ ಅತೀ ಹೆಚ್ಚು ಕ್ರೇಜ್ ನೀಡುತ್ತಿದ್ದ ಎರಡೂ ತಂಡಗಳು, ನಿಯಮಿತವಾಗಿ ಪಂದ್ಯಗಳನ್ನು ಆಡುತ್ತಿದ್ದ ಸಮಯವಿತ್ತು. ಆದರೆ 2012-13 ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ. ಐಸಿಸಿ ಈವೆಂಟ್‌’ಗಳು ಮತ್ತು ಏಷ್ಯಾ ಕಪ್‌’ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿತ್ತು..


COMMERCIAL BREAK
SCROLL TO CONTINUE READING

ಇದೀಗ ಏಷ್ಯಾಕಪ್ 2023 ಮತ್ತು ವಿಶ್ವಕಪ್ 2023 ಪಂದ್ಯಾವಳಿ ಪ್ರಾರಂಭವಾಗಲಿದೆ. ಈ ಪಂದ್ಯದಲ್ಲಿ ಉಭಯ ರಾಷ್ಟ್ರಗಳ ಪೈಪೋಟಿಯನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.  


ಇದನ್ನೂ ಓದಿ:  ಚಂದ್ರಯಾನ-3 ಯಶಸ್ಸಿಗೆ ವಿರಾಟ್ ಕೊಹ್ಲಿ ರೆಕಾರ್ಡ್ ಉಡೀಸ್..! ಯಾರಿಂದಲೂ ಆಗದ ಸಾಧನೆ ಇದು…


ಇನ್ನು ನಾವಿಂದು ಏಕದಿನ ಕ್ರಿಕೆಟ್’ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತಕ್ಕೆ ಹೆಚ್ಚು ಬಾರಿ ಗೆಲುವು ತಂದುಕೊಟ್ಟ ನಾಯಕ ಯಾರೆಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.


2007 ರಲ್ಲಿ ನಾಯಕತ್ವವನ್ನು ವಹಿಸಿಕೊಂಡ ಧೋನಿ, ಪಾಕಿಸ್ತಾನದ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ, ಧೋನಿ ನಾಯಕತ್ವದಲ್ಲಿ ಭಾರತವು 18 ಬಾರಿ ಮುಖಾಮುಖಿಯಾಗಿದ್ದು ಅದರಲ್ಲಿ 11 ಸಲ ವಿಜಯ ಸಾಧಿಸಿದ್ದರೆ, 7 ಬಾರಿ ಸೋಲು ಕಂಡಿದೆ.


ಈ ಪಟ್ಟಿಯಲ್ಲಿ ಧೋನಿ ನಂತರದ ಸ್ಥಾನದಲ್ಲಿ ಅಜರುದ್ದೀನ್ ಇದ್ದಾರೆ. ಅವರ ನೇತೃತ್ವದಲ್ಲಿ ಭಾರತವು 25 ಪಂದ್ಯಗಳನ್ನಾಡಿದ್ದು, 9 ಗೆಲುವು ಮತ್ತು 16 ಸೋಲು ಕಂಡಿದೆ


ಮೂರನೇ ಸ್ಥಾನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇದ್ದಾರೆ. ಇವರ ನೇತೃತ್ವದಲ್ಲಿ ಭಾರತ 21 ಬಾರಿ ಪಾಕ್ ವಿರುದ್ಧ ಸೆಣಸಾಡಿದೆ. ಇದರಲ್ಲಿ 8 ಗೆಲುವು ಮತ್ತು 11 ಸೋಲು ಕಂಡಿದೆ. ಇನ್ನುಳಿದ 2 ಪಂದ್ಯಗಳ ಫಲಿತಾಂಶವಿಲ್ಲ.


ನಾಲ್ಕನೇ ಸ್ಥಾನದಲ್ಲಿರುವ ಟೀಂ ಇಂಡಿಯಾದ ದಾದಾ ಸೌರವ್ ಗಂಗೂಲಿ ಅವರ ನೇತೃತ್ವದಲ್ಲಿ ಭಾರತ 17 ಪಂದ್ಯಗಳನ್ನಾಡಿದ್ದು, ಅದರಲ್ಲಿ ಏಳು ಬಾರಿ ಗೆಲುವು ಕಂಡರೆ, ಉಳಿದ 10 ಪಂದ್ಯಗಳಲ್ಲಿ ಸೋಲು ಕಂಡಿದೆ.


ಇನ್ನು ಐದನೇ ಸ್ಥಾನದಲ್ಲಿ ಈಗಿನ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಇದ್ದು, ಅವರ ನೇತೃತ್ವದಲ್ಲಿ 9 ಪಂದ್ಯಗಳನ್ನು ಪಾಕಿಸ್ತಾನ ವಿರುದ್ಧ ಭಾರತ ಆಡಿದೆ, ಇದರಲ್ಲಿ 5 ಗೆಲುವು ಮತ್ತು 4 ಸೋಲು ಕಂಡಿದೆ.


ಇನ್ನು ಆರನೇ ಸ್ಥಾನದಲ್ಲಿ ಕಪಿಲ್ ದೇವ್ ಇದ್ದಾರೆ. ಭಾರತೀಯ ಕ್ರಿಕೆಟ್ ಲೋಕಕ್ಕೆ ಹೊಸ ಭರವಸೆಯನ್ನು ನೀಡಿದ್ದೇ ಇವರು. ಇವರು 1983ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಟ್ಟಿದ್ದರು. ಇನ್ನು ಇವರ ನಾಯಕತ್ವದಲ್ಲಿ ಭಾರತ 13 ಬಾರಿ ಪಾಕಿಸ್ತಾನ ವಿರುದ್ಧ ಆಡಿದೆ. ಅದರಲ್ಲಿ 4 ಬಾರಿ ಗೆಲುವು ಕಂಡರೆ ಮಿಕ್ಕೆಲ್ಲಾ ಪಂದ್ಯದಲ್ಲಿ ಸೋಲು ಅನುಭವಿಸಿದೆ.


ಇದನ್ನೂ ಓದಿ: ಶ್ರಾವಣ ಮಂಗಳವಾರ ಇಳಿಕೆ ಕಂಡಿದೆಯೇ ಚಿನ್ನದ ದರ? 10 ಗ್ರಾಂ ಅಪರಂಜಿ ಚಿನ್ನದ ದರ ಎಷ್ಟಿದೆ ತಿಳಿಯಿರಿ


ನಂತರದ ಸ್ಥಾನದಲ್ಲಿ ಸುನಿಲ್ ಗವಾಸ್ಕರ್ ಇದ್ದು ಇವರ ನಾಯಕತ್ವದಲ್ಲಿ ಭಾರತ 7 ಬಾರಿ ಪಾಕಿಸ್ತಾನ ವಿರುದ್ಧ ಕಾದಾಡಿದೆ. ಅದರಲ್ಲಿ 4 ಬಾರಿ ಗೆದ್ದರೆ, 3 ಬಾರಿ ಸೋಲನ್ನು ಅನುಭವಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ