2ನೇ T20ಯಲ್ಲಿ ಗೆಲುವು ಸಾಧಿಸಿದ್ದೇ ತಡ… ಈ ವಿಷಯದಲ್ಲಿ ಪಾಕ್, ಆಸೀಸ್ ಹಿಂದಿಕ್ಕಿದ ಟೀಂ ಇಂಡಿಯಾ ಯುವಪಡೆ
Teams with most wins with 100+ runs in T20Is: ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ದಾಖಲೆಗಳನ್ನು ಹಿಂದಿಕ್ಕಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 100 ಅಥವಾ ಅದಕ್ಕಿಂತ ಹೆಚ್ಚು ರನ್’ಗಳ ಅಂತರದಿಂದ ಗೆದ್ದ ದೇಶವಾಗಿ ಭಾರತ ಹೊರಹೊಮ್ಮಿದೆ
Teams with most wins with 100+ runs in T20Is: ಜಿಂಬಾಬ್ವೆ ವಿರುದ್ಧದ ಎರಡನೇ T20I ಪಂದ್ಯದಲ್ಲಿ, ಟೀಂ ಇಂಡಿಯಾ ಭರ್ಜರಿ ಕಂಬ್ಯಾಕ್ ಮಾಡಿದ್ದಲ್ಲದೆ, ಅದ್ಭುತ ಗೆಲುವು ದಾಖಲಿಸಿದೆ. ಮೊದಲ ಇನ್ನಿಂಗ್ಸ್’ನಲ್ಲಿ 234 ರನ್’ಗಳಿಗೆ ಆಲೌಟ್ ಆದ ನಂತರ ಭಾರತದ ಬೌಲರ್’ಗಳು ಜಿಂಬಾಬ್ವೆಯನ್ನು 134 ರನ್’ಗಳಿಗೆ ಸೀಮಿತಗೊಳಿಸಿ, 100 ರನ್ ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಸಂಚಲನ… ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಜಯ್ ಶಾ ರಾಜೀನಾಮೆ! ಕಾರಣ ಕೂಡ ರಿವೀಲ್
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ದಾಖಲೆಗಳನ್ನು ಹಿಂದಿಕ್ಕಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 100 ಅಥವಾ ಅದಕ್ಕಿಂತ ಹೆಚ್ಚು ರನ್’ಗಳ ಅಂತರದಿಂದ ಗೆದ್ದ ದೇಶವಾಗಿ ಭಾರತ ಹೊರಹೊಮ್ಮಿದೆ.
ಟೀಂ ಇಂಡಿಯಾ ಟಿ20ಯಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ರನ್’ಗಳ ಅಂತರದಲ್ಲಿ ಜಯ ಸಾಧಿಸಿದ್ದು ಇದು ಐದನೇ ಬಾರಿ. ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ 4 ಬಾರಿ ಭಾರಿ ಅಂತರದಿಂದ ಪಂದ್ಯಗಳನ್ನು ಗೆದ್ದಿವೆ.
T20ಯಲ್ಲಿ 100+ ರನ್ ಅಂತರದಿಂದ ಗೆಲುವು ದಾಖಲಿಸಿದ ತಂಡಗಳು
ಭಾರತ: 5 ಗೆಲುವುಗಳು
ಪಾಕಿಸ್ತಾನ: 4 ಗೆಲುವು
ಆಸ್ಟ್ರೇಲಿಯಾ: 4 ಗೆಲುವುಗಳು
ಇಂಗ್ಲೆಂಡ್: 3 ಗೆಲುವುಗಳು
ಅಫ್ಘಾನಿಸ್ತಾನ: 3 ಗೆಲುವು
ಇದನ್ನೂ ಓದಿ: Vicks ಶೀತ, ಕೆಮ್ಮು ನಿವಾರಣೆಗೆ ಮಾತ್ರ ಅಲ್ಲ... ಹೀಗೆ ಬಳಸಿದರೆ ಸ್ಟ್ರೆಚ್ ಮಾರ್ಕ್ಸ್ ಕೂಡ ಮಾಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ