Team India World Record: ಟೀಂ ಇಂಡಿಯಾ 17 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಎರಡನೇ ಬಾರಿಗೆ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. ಇದಕ್ಕೂ ಮೊದಲು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007 ರ ಟಿ20 ವಿಶ್ವಕಪ್‌ನ ಮೊದಲ ಪ್ರಶಸ್ತಿಯನ್ನು ಗೆದ್ದಿತ್ತು. 13 ವರ್ಷಗಳ ನಂತರ ಭಾರತ ಏಕದಿನ ಅಥವಾ ಟಿ20 ಮಾದರಿಯಲ್ಲಿ ವಿಶ್ವಕಪ್ ಟ್ರೋಫಿ ಗೆದ್ದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!


ಭಾರತ ಕೊನೆಯ ಬಾರಿಗೆ 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿತ್ತು. 2024ರ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಮೂಲಕ ಭಾರತ ತಂಡ ಶ್ರೇಷ್ಠ ದಾಖಲೆ ಮಾಡಿದೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಭಾರತ 4 ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.


1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. ಇದಾದ ಬಳಿಕ 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೊದಲ ಟಿ20 ವಿಶ್ವಕಪ್ ಗೆದ್ದಿತ್ತು. 2011ರಲ್ಲಿ ಮತ್ತೆ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈಗ T20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದಿದೆ.


ಭಾರತ ಈಗ ಜಂಟಿಯಾಗಿ ಅತಿ ಹೆಚ್ಚು ವಿಶ್ವಕಪ್ ಟ್ರೋಫಿಗಳನ್ನು ಗೆದ್ದ ಎರಡನೇ ದೇಶವಾಗಿದೆ (ಏಕದಿನ ಮತ್ತು ಟಿ 20 ಮಾದರಿಗಳಲ್ಲಿ ಮಾತ್ರ). ಏಕದಿನ ಮತ್ತು ಟಿ20 ಮಾದರಿಯಲ್ಲಿ ಭಾರತ 4 ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತವಲ್ಲದೆ, ವೆಸ್ಟ್ ಇಂಡೀಸ್ ತಂಡವು 4 ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದ್ದು, ವಿಶ್ವದ ಗರಿಷ್ಠ 7 ವಿಶ್ವಕಪ್ ಟ್ರೋಫಿಗಳನ್ನು ಗೆದ್ದ ವಿಶ್ವದಾಖಲೆಯನ್ನು ಆಸ್ಟ್ರೇಲಿಯಾ ಹೊಂದಿದೆ.


ಅತಿ ಹೆಚ್ಚು ವಿಶ್ವಕಪ್ ಟ್ರೋಫಿಗಳನ್ನು ಗೆದ್ದ ದಾಖಲೆ (ಏಕದಿನ-ಟಿ20)


ಆಸ್ಟ್ರೇಲಿಯಾ - 7 ಟ್ರೋಫಿ (1987, 1999, 2003, 2007, 2015, 2023 ODI ವಿಶ್ವಕಪ್ ಮತ್ತು 2021 T20 ವಿಶ್ವಕಪ್)


ಭಾರತ - 4 ಟ್ರೋಫಿ (1983, 2011 ODI ವಿಶ್ವಕಪ್ ಮತ್ತು 2007, 2024 T20 ವಿಶ್ವಕಪ್)


ವೆಸ್ಟ್ ಇಂಡೀಸ್ - 4 ಟ್ರೋಫಿ (1975, 1979 ODI ವಿಶ್ವಕಪ್ ಮತ್ತು 2012, 2016 T20 ವಿಶ್ವಕಪ್)


ಇಂಗ್ಲೆಂಡ್ - 3 ಟ್ರೋಫಿಗಳು (2019 ODI ವಿಶ್ವಕಪ್ ಮತ್ತು 2010, 2022 T20 ವಿಶ್ವಕಪ್)


ಪಾಕಿಸ್ತಾನ - 2 ಟ್ರೋಫಿಗಳು (1992 ODI ವಿಶ್ವಕಪ್ ಮತ್ತು 2009 T20 ವಿಶ್ವಕಪ್)


ಶ್ರೀಲಂಕಾ - 2 ಟ್ರೋಫಿಗಳು (1996 ODI ವಿಶ್ವಕಪ್ ಮತ್ತು 2014 T20 ವಿಶ್ವಕಪ್)


 


ಅತಿ ಹೆಚ್ಚು ಟಿ20 ವಿಶ್ವಕಪ್ ಟ್ರೋಫಿ ಗೆದ್ದ ದಾಖಲೆ


ಭಾರತ - 2 ಬಾರಿ


ಇಂಗ್ಲೆಂಡ್ - 2 ಬಾರಿ


ವೆಸ್ಟ್ ಇಂಡೀಸ್ - 2 ಬಾರಿ


ಪಾಕಿಸ್ತಾನ - 1 ಬಾರಿ


ಶ್ರೀಲಂಕಾ - 1 ಬಾರಿ


ಆಸ್ಟ್ರೇಲಿಯಾ - 1 ಬಾರಿ


 


ಇಲ್ಲಿಯವರೆಗೆ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ


T20 ವಿಶ್ವಕಪ್ 2007: ಭಾರತ (ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ರನ್‌ಗಳಿಂದ ಸೋಲಿಸಿತು)


T20 ವಿಶ್ವಕಪ್ 2009: ಪಾಕಿಸ್ತಾನ (ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಸೋಲಿಸಿತು)


T20 ವಿಶ್ವಕಪ್ 2010: ಇಂಗ್ಲೆಂಡ್ (ಆಸ್ಟ್ರೇಲಿಯಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು)


T20 ವಿಶ್ವಕಪ್ 2012: ವೆಸ್ಟ್ ಇಂಡೀಸ್ (ಶ್ರೀಲಂಕಾವನ್ನು 36 ರನ್‌ಗಳಿಂದ ಸೋಲಿಸಿತು)


T20 ವಿಶ್ವಕಪ್ 2014: ಶ್ರೀಲಂಕಾ (ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು)


T20 ವಿಶ್ವಕಪ್ 2016: ವೆಸ್ಟ್ ಇಂಡೀಸ್ (ಇಂಗ್ಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು)


T20 ವಿಶ್ವಕಪ್ 2021: ಆಸ್ಟ್ರೇಲಿಯಾ (8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು)


T20 ವಿಶ್ವಕಪ್ 2022: ಇಂಗ್ಲೆಂಡ್ (ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು)


T20 ವಿಶ್ವಕಪ್ 2024: ಭಾರತ (ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿತು)


ಇದನ್ನೂ ಓದಿ: ಯುವರಾಜ್ ಸಿಂಗ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್! ಶಮಿ ಜೊತೆ ಮದುವೆ ವದಂತಿ ಮಧ್ಯೆ ಟೆನ್ನಿಸ್ ತಾರೆಯ ಪ್ರೀತಿ ರಹಸ್ಯ ಬಯಲು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.