ನವದೆಹಲಿ: ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಕನಿಷ್ಠ 40 ಸಿಆರ್ಪಿಎಫ್ ಸಿಬ್ಬಂದಿ ಗುರುವಾರದಂದು ಮೃತಪಟ್ಟಿದ್ದರು ಈ ಹಿನ್ನಲೆಯಲ್ಲಿ ಈಗ ಪ್ರತಿಕ್ರಿಯಿಸಿರುವ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಕಾರ್ಯದರ್ಶಿ ಸುರೇಶ್ ಬಾಫ್ನಾ 2019 ರ ವಿಶ್ವಕಪ್ ನಲ್ಲಿ ಭಾರತ ತಂಡವು ಪಾಕ್ ವಿರುದ್ಧ ಆಡಕೂಡದು ಎಂದು ಹೇಳಿದ್ದಾರೆ.



COMMERCIAL BREAK
SCROLL TO CONTINUE READING

ಪಾಕ್ ಪ್ರಧಾನಿ ಇದುವರೆಗೆ ಬಹಿರಂಗವಾಗಿ ಉಗ್ರರ ದಾಳಿ ವಿಚಾರವಾಗಿ ಮಾತನಾಡದ ಕಾರಣ ಎಲ್ಲೋ ಒಂದು ಕಡೆ ತಪ್ಪು ಇರುವುದು ಕಾಣಿಸುತ್ತದೆ ಎಂದರು. ನಮ್ಮ ಸೈನ್ಯ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಮೇಲಾದ ದಾಳಿಯನ್ನು ನಾವು ಖಂಡಿಸುತ್ತೇವೆ, ಸಿಸಿಐ ಕ್ರಿಕೆಟ್ ಸಂಸ್ಥೆಯಾಗಿದ್ದರೂ ಕೂಡ ಕ್ರೀಡೆಗಿಂತ ದೇಶವೇ ಮೊದಲು ಎಂದು ಸುರೇಶ್ ಬಾಫ್ನಾ ಹೇಳಿದರು.


ಮೇ 30 ರಿಂದ ಜುಲೈ 14 ರವರೆಗೆ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದ್ದು, ಭಾರತವು ಜೂನ್ 14 ರಂದು ಓಲ್ಡ್ ತ್ರಾಫಾರ್ದ್ ನಲ್ಲಿ ಪಾಕ್ ತಂಡವನ್ನು ಎದುರಿಸಲಿದೆ.