ದೇಶವೇ ಹೆಮ್ಮೆ ಪಡುತ್ತಿದೆ ಈ ನಕ್ಸಲ್ ಪ್ರದೇಶದ ಹುಡುಗ ಸಾಧನೆಗೆ!
ಒಡಿಶಾದ ಮಲಕಾಂಗಿರಿಯ ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿಯನ್ನು ಪಡೆದಿದೆ. ಆದರೆ ಈಗ ಈ ಪ್ರದೇಶದವನೇ ಆದ ಅಜಯ್ ಎನ್ನುವ ಹುಡುಗ ಸೆಪ್ಟೆಂಬರ್ 1 ರಿಂದ 4 ರ ವರೆಗೆ ಬ್ರಿಟನ್ ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾನೆ .
ಭುವನೇಶ್ವರ:ಒಡಿಶಾದ ಮಲಕಾಂಗಿರಿಯ ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿಯನ್ನು ಪಡೆದಿದೆ. ಆದರೆ ಈಗ ಈ ಪ್ರದೇಶದವನೇ ಆದ ಅಜಯ್ ಎನ್ನುವ ಹುಡುಗ ಸೆಪ್ಟೆಂಬರ್ 1 ರಿಂದ 4 ರ ವರೆಗೆ ಬ್ರಿಟನ್ ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾನೆ .
ಭಾರತ ತಂಡವು ಫೈನಲ್ ಪಂದ್ಯಗಳಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿತ್ತು.ತಂಡದ ಭಾಗವಾಗಿ ಅಜಯ ಮಹತ್ವದ ಪಾತ್ರವಹಿಸಿದ್ದರು. ಅಜಯ್ ಜೊತೆಗೆ ಮಹಿಳಾ ತಂಡದಲ್ಲಿದ್ದ ನಥಾಶರ್ಮ ಅದೇ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದರು.
ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅಜಯ್ ''ನಾವು ಅಲ್ಲಿಗೆ ಹೋಗಿ ಚಿನ್ನವನ್ನು ಗೆದ್ದು ಚಾಂಪಿಯನ್ ರಾಗಿ ಮರಳಿದ್ದು ಅನುಭವ ಅದ್ಬುತ "ಎಂದು ಸಂತಸವ್ಯಕ್ತಪಡಿಸಿದರು.ಮೂಲತ ಬೋಂಡಾ ಬುಡಕಟ್ಟು ಜನಾಂಗದವರಾಗಿರುವ ಅಜಯ್ ಅವರ ಪೋಷಕರು ದಿನಕೂಲಿ ಕಾರ್ಮಿಕರಾಗಿದ್ದಾರೆ ಅವರ ಬೆಂಬಲಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ