INd vs SA 1st test :ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ ಭಾರಿ ಆಘಾತವನ್ನು ನೀಡಿದೆ. ಮಾರಕ ಬೌಲಿಂಗ್‌ಗೆ ಮುಂದಾದ ದ.ಆಫ್ರಿಕಾ ಬೌಲರ್ಸ್‌ಗಳು ಭಾರತದ ಆರಂಭಿಕ ಆಟಗಾರ ವಿಕೇಟ್‌ ಪಡೆದಿದ್ಧಾರೆ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್‌ ಮತ್ತು ಜೈಸ್ವಾಲ್‌ ವಿಕೆಟ್‌ ಸೇರೆದಂತೆ ಶುಭ್ಮನ್‌ ಗಿಲ್‌ ಅವರ ವಿಕೆಟ್‌ ಕಿತ್ತು ಭಾರತಕ್ಕೆ ಬಿಗ್ ಶಾಕ್‌ ನೀಡಿದೆ.


COMMERCIAL BREAK
SCROLL TO CONTINUE READING

ಮೊದಲ ಸೆಷನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಮುನ್ನಡೆ ಸಾಧಿಸಿದೆ. ಎರಡು ತಂಡಗಳು ಊಟದ ವಿರಾಮವನ್ನು ತೆಗದು ಕೊಂಡಿದ್ದು, ಲಂಚ್‌ ಬ್ರೇಕ್‌ ಮುನ್ನ ಭಾರತವು 26 ಒವರ್‌ ಗಳಿಗೆ ಆರಂಭಿಕ ವಿಕೆಟ್‌ 3 ಗಳನ್ನು ಕಳೆದುಕೊಂಡು 91 ರನ್‌ಗಳನ್ನು ಗಳಿಸಿದೆ.


ಇದನ್ನು ಓದಿ-ಮತ್ತೊಂದು ವಿಶ್ವದಾಖಲೆಯತ್ತ ವಿರಾಟ್ ಚಿತ್ತ… ಒಂದೇ ಹೊಡೆತಕ್ಕೆ ಇಬ್ಬರು ದಿಗ್ಗಜರ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಂಗ್ ಕೊಹ್ಲಿ?


ದಕ್ಷಿಣ ಆಫ್ರಿಕಾದ ಪ್ರಮುಖ ಬೌಲರ್‌ ಕಗಿಸೋ ರಬಾಡ ತಮ್ಮ ಮೊದಲನೇ ಒವರ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತವನ್ನ ನೀಡಿದರು. ತಂಡದ ನಾಯಕರಾದ ರೋಹಿತ್‌ ಶರ್ಮಾ ಅವರ ವಿಕೇಟ್‌ ಪಡೆದುಕೊಂಡು. 37 ಬಾಲ್‌ ಎದುರಿದ ರೋಹಿತ್‌ ಶರ್ಮಾ ಕೇವಲ ನಾಲ್ಕು ರನ್‌ಗಳಿಗೆ ಪೆವಿಲಿಯನ್‌ ಕಡೆಗೆ ಮುಖ ಮಾಡಿದರು. 


ರೋಹಿತ್‌ ಶರ್ಮಾ ಔಟಾದ ಬೆನ್ನಲ್ಲೆ ತಂಡದ ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ 17 ರನ್‌ ಗಳಿಸಿರುವಾಗ ಬರ್ಗರ್‌ ಅವರ ಒವರ್‌ನಲ್ಲಿ ವಿಕೇಟ್‌ ಕೀಪರ್‌  ಕೈಲ್‌ ವೆರೆನ್ನೆ ಕೈಗೆ ಕ್ಯಾಚ್‌ ನೀಡಿ ಮರಳಿದರು. ಇನ್ನು ಶುಭ್ಮನ್‌ ಗಿಲ್‌ ಕೂಡ ಹೋದ ದಾರಿಗೆ ಶುಂಕವಿಲ್ಲದಂತೆ ಪೆವಿಲಿಯನ್‌ಗೆ ವಾಪಾಸ್‌ ಆದರು.


ಇದನ್ನು ಓದಿ- ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ, ಚೊಚ್ಚಲ ಟೆಸ್ಟ್‌ ಪಂದ್ಯವನ್ನು ಆಡಲಿರುವ ಕನ್ನಡಿಗ ಪ್ರಸಿಧ್‌ ಕೃಷ್ಣ ! 


ಲಂಚ್‌ ಬ್ರೇಕ್‌ ತೆಗೆದು ಕೊಳ್ಳುವುದಕ್ಕು ಮುನ್ನ  ವಿರಾಟ್‌ ಹಾಗು ಶ್ರೇಯಸ್‌ ಅಯ್ಯರ್‌ ಅವರ ಜೊತೆಯಾಗಿ ತಂಡಕ್ಕೆ ಆಸರೆಯಾದರು. ಲಂಚ್‌ ಬೇಕ್‌ ನಂತರ ಬ್ಯಾಟಿಂಗ್‌ ಆರಂಭಿಸಲು ಮುಂದಾದ ಶ್ರೇಯಸ್‌ ಅಯ್ಯರ್‌ 30 ರನ್ ಗಳಿಸಿ ಉತ್ತಮ ಬ್ಯಾಟಿಂಗ್‌ ಲಯದಲ್ಲಿರುವಾಗಲೆ  ರಾಬಾಡ ಒವರ್‌ನಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಒಂದು ಕಡೆ ವಿರಾಟ್‌ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ಧಾರೆ.


ದ. ಆಪ್ರಿಕಾ ಪರ ರಬಾಡ ಮತ್ತು ಬರ್ಗರ್‌ ಬೌಲಿಂಗ್‌ನಲ್ಲಿ ಉತ್ತಮ ಸ್ಪೆಲ್‌ ಮಾಡಿದ್ಧಾರೆ. ರಬಾಡ ಭಾರತ ತಂಡದ ನಾಯಕ ರೋಹಿತ್‌ ಹಾಗೂ ಸೆಟಲ್‌ ಆಗಿದ್ದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರ ವಿಕೆಟ್‌ ಕಿತ್ತರು. ಇನ್ನೊಂದು ಕಡೆ ಬರ್ಗರ್‌ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜೈಸ್ವಾಲ್‌ ಮತ್ತು ಶುಬ್ಮನ್‌ ಗಿಲ್‌ ಅವರ ವಿಕೇಟ್‌ ಪಡೆದು ಕೊಂಡರು.  


ಸಧ್ಯಾ ಭಾರತವು 100 ಗಡಿ ದಾಟಿದ್ದು ತಂಡದ ಪರ ವಿರಾಟ್‌ ಮತ್ತು ಕನ್ನಡಿಗ ಕೆಎಲ್‌ ರಾಹುಲ್‌ ಇಬ್ಬರು ಸೇರಿ ಬ್ಯಾಟಿಂಗ್‌ ಮುಂದುವರೆಸಿದ್ದಾರೆ. ಭಾರತಕ್ಕೆ ಈಗ ಇವೆರೆಡು ವಿಕೆಟ್‌ಗಳು ಪ್ರಮುಖವಾಗಿವೆ.  ರವಿಚಂದ್ರನ್‌ ಅಶ್ವಿನ್‌, ಶಾರ್ದೂಲ್‌ ಠಾಕೂರ್‌,  ಜಸ್ಪ್ರಿತ್‌ ಬೂಮ್ರ, ಮೊಹಮ್ಮದ್‌ ಸಿರಾಜ್‌ ಸೇರಿದಂತೆ ಪ್ರಸಿಧ್‌ ಕೃಷ್ಣ ಮುಂಬರುವ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ