IND vs WI 2nd ODI Highlights: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯವು ಶನಿವಾರ (ಜುಲೈ 29) ಬ್ರಿಡ್ಜ್‌ಟೌನ್‌ ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರದರ್ಶನ ತೀರಾ ಕಳಪೆಯಾಗಿದ್ದು, ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವ ನೀಡಲಾಗಿದ್ದು, ಯುವ ಆಟಗಾರರಿಗೆ ಆಡುವ ಅವಕಾಶ ಸಿಕ್ಕಿತ್ತು. ಆದರೆ ಈ ದೊಡ್ಡ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Today Rashifal: ಈ ರಾಶಿಗೆ ಇಂದು ಸಂಪತ್ತಿನ ಮಳೆ, ವಿದೇಶ ಪ್ರಯಾಣದ ಯೋಗ -ವೃತ್ತಿಯಲ್ಲಿ ಬಡ್ತಿ!


ಈ ಪಂದ್ಯದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ವೆಸ್ಟ್ ಇಂಡೀಸ್ ಇದರ ಸಂಪೂರ್ಣ ಲಾಭವನ್ನು ಪಡೆದುಕೊಂಡು, ಮೊದಲು ಭಾರತವನ್ನು 181 ರನ್‌ ಗಳಿಗೆ ಆಲೌಟ್ ಮಾಡಿತು. ನಂತರ 6 ವಿಕೆಟ್‌ ಗಳು ಉಳಿದಿರುವಂತೆ ಈ ಗುರಿಯನ್ನು ಮುಟ್ಟಿತು. ಇದರೊಂದಿಗೆ ಉಭಯ ತಂಡಗಳ ನಡುವಣ ಮೂರು ಪಂದ್ಯಗಳ ಸರಣಿ 1-1ರ ಸಮಬಲಕ್ಕೆ ಬಂದಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗಳ ಜಯ ಸಾಧಿಸಿತ್ತು.


ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ನಾಲ್ಕು ವರ್ಷಗಳ ಸುದೀರ್ಘ ಗೆಲುವಿನ ಓಟವೂ ಅಂತ್ಯಗೊಂಡಿದೆ. ಇದು ಭಾರತದ ಈ ತಂಡದ ವಿರುದ್ಧ ಇದುವರೆಗಿನ ಸುದೀರ್ಘ ಗೆಲುವಿನ ಸರಣಿಯಾಗಿದೆ. ಭಾರತ 2019 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಸತತ 9 ಏಕದಿನ ಪಂದ್ಯಗಳನ್ನು ಗೆದ್ದಿದೆ. ಇದಕ್ಕೂ ಮೊದಲು 1994 ಮತ್ತು 2009 ರಿಂದ 2011 ರವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಸತತ 5 ಪಂದ್ಯಗಳನ್ನು ಗೆದ್ದಿತ್ತು. ಈಗ ಉಭಯ ತಂಡಗಳ ನಡುವಿನ ಸರಣಿಯ ಕೊನೆಯ ಪಂದ್ಯ ಆಗಸ್ಟ್ 1 ರಂದು ಟ್ರಿನಿಡಾಡ್‌ ನಲ್ಲಿ ನಡೆಯಲಿದೆ.


ಇದನ್ನೂ ಓದಿ: ಈ ರಾಶಿಗೆ ಸರ್ವ ಸಂಪತ್ತು ನೀಡಲು ಕಾಯುತ್ತಿದ್ದಾನೆ ರಾಹು: 3 ತಿಂಗಳು ಸ್ವರ್ಗಸುಖ-ಧನಲಕ್ಷ್ಮೀ ಜೊತೆ ನಿಲ್ಲುವಳು!


ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಭಾರತೀಯ ಆಡಳಿತದ ನಿರ್ಧಾರವು ತಂಡದ ಸೋಲಿಗೆ ಕಾರಣವಾದಂತಿದೆ. ಟೀಂ ಇಂಡಿಯಾದ ಸ್ಕೋರ್ 40.5 ಓವರ್‌ಗಳಲ್ಲಿ 181 ರನ್‌ಗಳಷ್ಟೇ ಆಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಗಳಿಸಿದ್ದು ಇಶಾನ್ ಕಿಶನ್ (55). ಇನ್ನು ಶುಭಮನ್ ಗಿಲ್ 34 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಇದನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ತಮ್ಮ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ