IND vs PAK: ಪಾಕಿಸ್ತಾನದ ವಿರುದ್ಧ ಸಮರಕ್ಕೆ ಸಜ್ಜಾದ ಟೀಂ ಇಂಡಿಯಾ..! ಉಭಯ ತಂಡಗಳ ಮುಖಾಮುಖಿ ಎಲ್ಲಿ, ಯಾವಾಗ..?
IND vs PAK: ಮಹಿಳೆಯರ ಏಷ್ಯಾ ಕಪ್(Womens Asia Cup 2024)ನ ಒಂಬತ್ತನೇ ಸೀಸನ್ ಶುಕ್ರವಾರ, ಜುಲೈ 19 ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. T20I ಮಾದರಿಯಲ್ಲಿ ಎಂಟು ತಂಡಗಳ ಈ ಪಂದ್ಯಾವಳಿ ನಡೆಯಲಿದ್ದು, ಇದು ಸತತ ಐದನೇ ಆವೃತ್ತಿಯಾಗಿದೆ. ಪ್ರಾಥಮಿಕ ರೌಂಡ್-ರಾಬಿನ್ ಹಂತದಲ್ಲಿ, ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಲಳಗಿ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ನಾಲ್ಕು ತಂಡಗಳುಲ್ಲ ಪ್ರತಿ ತಂಡದಲ್ಲೂ ಭಾರಿ ಮೊತ್ತ ಕಂಡುಕೊಳ್ಳಲಿರುವ ಒಂದು ತಂಡ ಸೆಮಿಫೈನಲ್‌ಗೆ ತಲುಪಲಿದೆ. ಅಂದರೆ ʻಎʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ತಂಡ ಹಾಗೂ ʻಬಿʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಒಂದು ತಂಡ ಸೆಮಿಫ್ಯನಲ್‌ನಲ್ಲಿ ಮುಖಾಮುಖಿಯಾಗಲಿವೆ.
IND vs PAK: ಮಹಿಳೆಯರ ಏಷ್ಯಾ ಕಪ್(Womens Asia Cup 2024)ನ ಒಂಬತ್ತನೇ ಸೀಸನ್ ಶುಕ್ರವಾರ, ಜುಲೈ 19 ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. T20I ಮಾದರಿಯಲ್ಲಿ ಎಂಟು ತಂಡಗಳ ಈ ಪಂದ್ಯಾವಳಿ ನಡೆಯಲಿದ್ದು, ಇದು ಸತತ ಐದನೇ ಆವೃತ್ತಿಯಾಗಿದೆ. ಪ್ರಾಥಮಿಕ ರೌಂಡ್-ರಾಬಿನ್ ಹಂತದಲ್ಲಿ, ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ನಾಲ್ಕು ತಂಡಗಳುಲ್ಲ ಪ್ರತಿ ತಂಡದಲ್ಲೂ ಭಾರಿ ಮೊತ್ತ ಕಂಡುಕೊಳ್ಳಲಿರುವ ಒಂದು ತಂಡ ಸೆಮಿಫೈನಲ್‌ಗೆ ತಲುಪಲಿದೆ. ಅಂದರೆ ʻಎʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ತಂಡ ಹಾಗೂ ʻಬಿʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಒಂದು ತಂಡ ಸೆಮಿಫ್ಯನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಭಾರತ, ಪಾಕಿಸ್ತಾನ, ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್, ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ಎಂಟು ತಂಡಗಳ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ. ಜುಲೈ 19 ರಂದು ಟೀಂ ಇಂಡಿಯಾ ಏಷ್ಯಾ ಕಪ್ 2024 ರಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಇದನ್ನೂ ಓದಿ: IND vs SL: ಟೀಂ ಇಂಡಿಯಾ ಪ್ಲೇಯಿಂಗ್ XI ಪ್ರಕಟಿಸುವಲ್ಲಿ ಮುಂದೂಡಿಕೆ..ಕಾರಣ..?
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳೊಂದಿಗೆ ʻಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ʻಬಿʼ ಗುಂಪಿನಲ್ಲಿ ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಮಲೇಷ್ಯಾ ತಂಡಗಳು ಸೇರಿವೆ. ಟೂರ್ನಿಯ ಮೊದಲ ಪಂದ್ಯ ನೇಪಾಳ ಮತ್ತು ಯುಎಇ ತಂಡಗಳ ನಡುವೆ ನಡೆಯಲಿದ್ದು, ಅದೇ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಬಹು ನಿರೀಕ್ಷಿತ ಪಂದ್ಯ ನಡೆಯಲಿದೆ. ಇನ್ನೂ, ಜುಲೈ 28 ರಂದು ಡಂಬುಲಾದಲ್ಲಿ ಫೈನಲ್ ನಡೆಯಲಿದೆ.
2022 ರ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಭಾರತ ಹಿಂದಿನ ಆವೃತ್ತಿಯ ಏಷ್ಯಾಕಪ್ ಅನ್ನು ಗೆದ್ದುಕೊಂಡಿತು. ಟೂರ್ನಿಯ ಇತಿಹಾಸದಲ್ಲಿ ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಜುಲೈ 19 ರಂದು ನಡೆಯಲಿರುವ ಅಭಿಯಾನದ ಮೊದಲ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು, ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ನಡುವಿನ ಈ ಹೈ-ವೋಲ್ಟೇಜ್ ಪಂದ್ಯ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಕ್ಕಾಹಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.