ನವದೆಹಲಿ: ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ 2019 ರ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಜೂನ್ 16 ರಂದು ವಿಶ್ವಕಪ್ ಟೂರ್ನಿ ಪಾಕ್ ವಿರುದ್ಧದ ಪಂದ್ಯವನ್ನು ಭಾರತ ಆಡಬಾರದು,ನಾವೆಲ್ಲಾ ನಮ್ಮ ಸೈನಿಕರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.ಪಾಕಿಸ್ತಾನವು ಗಡಿಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ.ಈ ದಾಳಿ ನಿಜಕ್ಕೂ ಅಚ್ಚರಿಯನ್ನು ತರಿಸಿದೆ ಎಂದರು.


ಪಾಯಿಂಟ್ ಗಳು ಕಳೆದು ಕೊಂಡರು ಚಿಂತೆಯಿಲ್ಲ, ಭಾರತಕ್ಕೆ ಪಾಕಿಸ್ತಾನದ ಜೊತೆ ಆಡದೆ ವಿಶ್ವಕಪ್ ಗೆಲ್ಲುವಷ್ಟು ಶಕ್ತಿಯಿದೆ ಎಂದರು ಹರ್ಭಜನ್ ಸಿಂಗ್ ತಿಳಿಸಿದರು.ಇದಕ್ಕೂ ಮೊದಲು ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಕಾರ್ಯದರ್ಶಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.ಕ್ರೀಡೆಗಿಂತ ದೇಶವೇ ಮೊದಲು ಎಂದು ಹೇಳಿದ್ದರು.


ಹರ್ಭಜನ್ ಸಿಂಗ್ ಟೆಸ್ಟ್ ಕ್ರಿಕೆಟ್ ನಲ್ಲಿ 417 ವಿಕೆಟ್ ಗಳನ್ನು ಕಬಳಿಸಿದ್ದಾರೆ.2015 ರಲ್ಲಿಯೇ ಅವರು ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.ಸದ್ಯ ಐಪಿಎಲ್ ನಲ್ಲಿ ನಿರಂತರವಾಗಿ ಆಡುತ್ತಿದ್ದಾರೆ.