India vs Australia, 3rd ODI: ರೋಹಿತ್, ಕೊಹ್ಲಿ ಅಬ್ಬರಕ್ಕೆ ತಣ್ಣಗಾದ ಆಸಿಸ್ ಪಡೆ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್ ಅಂತರದಲ್ಲಿ ಗೆಲುವನ್ನು ಸಾಧಿಸಿದೆ. ಆ ಮೂಲಕ ಈಗ 2-1 ರ ಅಂತರದಲ್ಲಿ ಸರಣಿ ಗೆಲುವು ಸಾಧಿಸಿದೆ.
ನವದೆಹಲಿ: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್ ಅಂತರದಲ್ಲಿ ಗೆಲುವನ್ನು ಸಾಧಿಸಿದೆ. ಆ ಮೂಲಕ ಈಗ 2-1 ರ ಅಂತರದಲ್ಲಿ ಸರಣಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸಿಸ್ ತಂಡವು ಸ್ಟೀವ್ ಸ್ಮಿತ್ ಅವ್ರ ಭರ್ಜರಿ ಶತಕ(131) ಹಾಗೂ ಮಾರ್ನಸ್ ಲಾಬುಸ್ ಚೇಂಜ್ ಅವರ ಅರ್ಧಶತಕ (54)ದ ನೆರವಿನಿಂದಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಭಾರತ ತಂಡದ ಪರವಾಗಿ ಮೊಹಮ್ಮದ್ ಶಮಿ ನಾಲ್ಕು ವಿಕೆಟ್ ಹಾಗೂ ರವಿಂದ್ರ ಜಡೇಜಾ ಎರಡು ವಿಕೆಟ್ ಗಳನ್ನು ಪಡೆದರು.
ಇನ್ನೊಂದೆಡೆ ಆಸೀಸ್ ಪಡೆ ನೀಡಿದ್ದ 287 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ರೋಹಿತ್ ಶರ್ಮಾ ಅವರು 119 ಹಾಗೂ ವಿರಾಟ್ ಕೊಹ್ಲಿ 89 ಹಾಗೂ ಶ್ರೇಯಸ್ ಅಯ್ಯರ್ ಅವರ 44 ರನ್ ಗಳ ನೆರವಿನಿಂದಾಗಿ ಭಾರತ ತಂಡವು ಮೂರು ವಿಕೆಟ್ ನಷ್ಟಕ್ಕೆ 47.3 ಓವರ್ ಗಳಲ್ಲಿ 289 ರನ್ ಗಳಿಸುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು.