India vs Australia 3rd T20I: ಇಂಡೋ-ಆಸೀಸ್ ರಣರೋಚಕ ಫೈನಲ್: ಲೈವ್ ಪಂದ್ಯವನ್ನು ಹೀಗೆ ನೋಡಿ
ಇಂದು ಹೈದರಾಬಾದ್ನಲ್ಲಿ ಸಂಜೆ 7.30ಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ನಾಗ್ಪುರ T20I ಅನ್ನು ಗೆದ್ದ ನಂತರ ಮೂರು ಪಂದ್ಯಗಳ ಸರಣಿಯು 1-1 ರಲ್ಲಿ ಸಮಬಲಗೊಂಡಿದೆ. ಕಳೆದ ಎರಡನೇ ಪಂದ್ಯವನ್ನು ಪಿಚ್ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಕೇವಲ ಎಂಟು ಓವರ್ಗಳಿಗೆ ಸೀಮಿತಗೊಳಿಸಲಾಯಿತು.
ಇದನ್ನೂ ಓದಿ: T20 World Cup: ಈ ತಂಡ ಟಿ-20 ವಿಶ್ವಕಪ್ ಚಾಂಪಿಯನ್ ಆಗಲಿದೆ ಎಂದು ಕ್ರಿಕೆಟ್ ದಿಗ್ಗಜನ ಭವಿಷ್ಯ?
ಇಂದು ಹೈದರಾಬಾದ್ನಲ್ಲಿ ಸಂಜೆ 7.30ಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಜಸ್ಪ್ರೀತ್ ಬುಮ್ರಾ ಸಹ ತಂಡಕ್ಕೆ ಮರಳಿದ್ದು, ನಿರೀಕ್ಷೆಗಳ ಮಟ್ಟ ಹೆಚ್ಚಾಗಿದೆ. ಇದೇ ದೇಶವೇ ಇಂದಿನ ಮ್ಯಾಚ್ ಕಡೆಗೆ ಗಮನ ಹರಿಸಿದ್ದು, ಟೀಂ ಇಂಡಿಯಾದ ಗೆಲುವಿಗೆ ಪ್ರಾರ್ಥಿಸುತ್ತಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3 ನೇ ಟಿ20 ಪಂದ್ಯ ನಡೆಯಲಿದೆ. ಇದು ಫೈನಲ್ ಪಂದ್ಯವಾಗಿದ್ದು, ಸಂಜೆ 7 ಗಂಟೆ ಪ್ರಾರಂಭವಾಗಲಿದೆ.
ಇನ್ನು ಈ ಹೈವೋಲ್ಟೇಜ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನೇರಪ್ರಸಾರ ಮಾಡುತ್ತಿದೆ. ಅಷ್ಟೇ ಅಲ್ಲದೆ, ಭಾರತ vs ಆಸ್ಟ್ರೇಲಿಯಾ 3 ನೇ T20I ಪಂದ್ಯ ಡಿಸ್ನಿ + ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿರುತ್ತದೆ.
ಇದನ್ನೂ ಓದಿ: IND vs AUS : ಮೂರನೇ ಸರಣಿ ಸೋತರೆ, ರೋಹಿತ್ ಇಡಬೇಕಾಗುತ್ತದೆ ಈ 3 ಹೆಜ್ಜೆಗಳನ್ನು!
ಭಾರತ ಸಂಭಾವ್ಯ ಆಟಗಾರರ ಪಟ್ಟಿ:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಹರ್ಷಲ್ ಪಟೇಲ್, ಯುಜುವೇಂದ್ರ ಚಾಹಲ್,
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.