ನವದೆಹಲಿ: ರಾಜ್‌ಕೋಟ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಭಾರತದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಅವರು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದರು, ಇದರಲ್ಲಿ ಅವರು 52 ಎಸೆತಗಳಲ್ಲಿ 80 ರನ್ ಗಳಿಸಿದ್ದರಿಂದಾಗಿ ಭಾರತ 50 ಓವರ್‌ಗಳಲ್ಲಿ 340/6 ರನ್ ಗಳಿಸಿತು. 



COMMERCIAL BREAK
SCROLL TO CONTINUE READING

ಇನ್ನೊಂದು ಸಂಗತಿ ಏನೆಂದರೆ ರಿಷಬ್ ಪಂತ್ ಬದಲಾಗಿ ವಿಕೆಟ್ ಕೀಪಿಂಗ್ ಅವಕಾಶ ಪಡೆದ ಕೆ.ಎಲ್ ರಾಹುಲ್ ಅವರು ರವಿಂದ್ರಾ ಜಡೇಜಾ ಅವರ ಎಸೆತದಲ್ಲಿ ಆಸಿಸ್ ಆಟಗಾರ ಆರನ್ ಫಿಂಚ್ ಅವರನ್ನು ಸ್ಟಂಪ್ ಔಟ್ ಮಾಡಿದ ರೀತಿಯಂತೂ ಒಂದು ಕ್ಷಣ ಧೋನಿಯ ವೇಗದ ವಿಕೆಟ್ ಕೀಪಿಂಗ್ ನೆನೆಪಿಸುವಂತಿತ್ತು.


ಈಗ ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವರು ಈ ವಿಡಿಯೋವನ್ನು ನೋಡಿ ಧೋನಿ ಸ್ಥಾನ ತುಂಬಲು ರಿಷಬ್ ಪಂತ್ ಗಿಂತ ಕೆ.ಎಲ್.ರಾಹುಲ್ ಹೆಚ್ಚು ಸೂಕ್ತ ಎಂದು ಕಾಮೆಂಟ್ ಮಾಡಿದ್ದಾರೆ.