ಭಾರತ-ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ, ದಿನಾಂಕ, ಸಮಯ, ಉಚಿತ ವೀಕ್ಷಣೆ, ಲೈವ್ ಸ್ಟ್ರೀಮಿಂಗ್ ಮಾಹಿತಿ ಇಲ್ಲಿದೆ
India vs Australia: ಕಾಂಗರೂ ಪಡೆ ಭಾರತ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದ್ದು, ವಿಶ್ವಕಪ್’ಗೂ ಮುನ್ನ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ವಿಶ್ವಕಪ್ ಬಳಿಕ ಟಿ20 ಸರಣಿ ಆಯೋಜಿಸಲಾಗುತ್ತದೆ.
India vs Australia: ಏಷ್ಯಾಕಪ್ ಗೆದ್ದ ನಂತರ ಭಾರತ ಕ್ರಿಕೆಟ್ ತಂಡ ಈಗ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. 2011ರ ನಂತರ ಈ ಪ್ರಶಸ್ತಿ ಗೆಲ್ಲಲು ಟೀಂ ಇಂಡಿಯಾ ಸಿದ್ಧತೆ ನಡೆಸಿದೆ. ಈ ಅನುಕ್ರಮದಲ್ಲಿ ಅಕ್ಟೋಬರ್ ರಿಂದ ನಡೆಯಲಿರುವ ವಿಶ್ವಕಪ್’ಗೆ ಮೊದಲು ಭಾರತವು ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ ಎದುರಿಸಲಿದೆ.
ಇದನ್ನೂ ಓದಿ: ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಯಾರು ಗೊತ್ತಾ?
ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡ ಎಷ್ಟು ಪಂದ್ಯಗಳನ್ನು ಆಡಲಿದೆ?
ಕಾಂಗರೂ ಪಡೆ ಭಾರತ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದ್ದು, ವಿಶ್ವಕಪ್’ಗೂ ಮುನ್ನ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ವಿಶ್ವಕಪ್ ಬಳಿಕ ಟಿ20 ಸರಣಿ ಆಯೋಜಿಸಲಾಗುತ್ತದೆ. ಕಾಂಗರೂ ತಂಡ ನವೆಂಬರ್ 23 ರಿಂದ ಡಿಸೆಂಬರ್ 3ರ ನಡುವೆ ಐದು ಟಿ20 ಪಂದ್ಯಗಳನ್ನು ಆಡಲಿದೆ.
ODI ಸರಣಿ ಪಂದ್ಯಗಳು ಯಾವಾಗ ನಡೆಯಲಿವೆ?
ಸೆಪ್ಟೆಂಬರ್ 22 ರಂದು ಏಕದಿನ ಸರಣಿ ಆರಂಭವಾದರೆ, ಎರಡನೇ ಪಂದ್ಯ ಸೆ.24 ಹಾಗೂ ಮೂರನೇ ಪಂದ್ಯ ಸೆ.27ರಂದು ನಡೆಯಲಿದೆ.
ಎಲ್ಲಿ ನಡೆಯಲಿದೆ ಏಕದಿನ ಸರಣಿ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ, ಎರಡನೇ ಪಂದ್ಯ ಇಂದೋರ್‌ನಲ್ಲಿ ಮತ್ತು ಮೂರನೇ ಪಂದ್ಯ ರಾಜ್‌ಕೋಟ್’ನಲ್ಲಿ ನಡೆಯಲಿದೆ.
ಎಷ್ಟು ಗಂಟೆಗೆ ಪ್ರಾರಂಭ?
ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಮಧ್ಯಾಹ್ನ 1:30 ರಿಂದ ನಡೆಯಲಿವೆ.
ಭಾರತ vs ಆಸ್ಟ್ರೇಲಿಯಾದ ಹೆಡ್ ಟು ಹೆಡ್ ರೆಕಾರ್ಡ್ ಹೇಗಿದೆ?
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ 146 ಏಕದಿನ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಕಾಂಗರೂ ತಂಡ 82 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 54 ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. 10 ಪಂದ್ಯಗಳ ಫಲಿತಾಂಶ ಬಂದಿಲ್ಲ.
ನೀವು ಯಾವ ಟಿವಿ ಚಾನೆಲ್’ನಲ್ಲಿ ಸರಣಿ ಪಂದ್ಯಗಳನ್ನು ವೀಕ್ಷಿಸಬಹುದು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯನ್ನು ಸ್ಪೋರ್ಟ್ಸ್ 18 ಚಾನೆಲ್’ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇನ್ನು, ಡಿಡಿ ಫ್ರೀ ಡಿಶ್ ಬಳಸುವ ವೀಕ್ಷಕರು ಡಿಡಿ ಸ್ಪೋರ್ಟ್ಸ್’ನಲ್ಲಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಈ ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಭಾರೀ ವರ್ಷಧಾರೆ! ಜಲಪ್ರಳಯದ ಮುನ್ನೆಚ್ಚರಿಕೆ
ಲೈವ್ ಸ್ಟ್ರೀಮಿಂಗ್ ಎಲ್ಲಿ ಲಭ್ಯ?
ಜಿಯೋ ಸಿನಿಮಾ ಆಪ್’ನಲ್ಲಿ ನೀವು ODI ಸರಣಿಯ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ