India vs Bangladesh T20I Series: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ 2ನೇ ಪಂದ್ಯವು ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯ ಬಳಿಕ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಟಿ-20 ಸರಣಿಯೂ ನಡೆಯಲಿದೆ. ಇದರ ಮೊದಲ ಪಂದ್ಯ ಅಕ್ಟೋಬರ್ 6ರಂದು ನಡೆಯಲಿದೆ. ಬಿಸಿಸಿಐ ಶೀಘ್ರದಲ್ಲೇ ಟಿ-20 ಸರಣಿಗೆ ತಂಡವನ್ನು ಪ್ರಕಟಿಸಲಿದ್ದು, ಇದರಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ಕಾಣಬಹುದು. 


COMMERCIAL BREAK
SCROLL TO CONTINUE READING

ಸಂಜು ಸ್ಯಾಮ್ಸನ್‌ಗೆ ಸ್ಥಾನ, ಇಶಾನ್ ಕಿಶನ್‌ಗೂ ಅವಕಾಶ?


ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ರಿಷಬ್ ಪಂತ್ ಅವರಿಗೆ ವಿಶ್ರಾಂತಿ ನೀಡಬಹುದು. ಅವರು ನಿರಂತರವಾಗಿ ಟೆಸ್ಟ್ ಆಡುತ್ತಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ ಇಶಾನ್ ಕಿಶನ್‌ಗೂ ತಂಡದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಇಬ್ಬರೂ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದಾದ ಬಳಿಕವೂ ಸಂಜು ಸ್ಯಾಮ್ಸನ್ ರನ್ ಗಳಿಕೆ ವಿಚಾರದಲ್ಲಿ ಇಶಾನ್ ಕಿಶನ್ ಅವರಿಗಿಂತ ಮುಂದಿದ್ದಾರೆ. ಏತನ್ಮಧ್ಯೆ, ಇಶಾನ್ ಕಿಶನ್ ಇರಾನಿ ಟ್ರೋಫಿಗಾಗಿ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. ಈ ಪಂದ್ಯ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, 5ರವರೆಗೆ ನಡೆಯಲಿದೆ. ಮೊದಲ ಟಿ-20 ಪಂದ್ಯ ಅಕ್ಟೋಬರ್ 6ರಂದು ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಇರಾನಿ ಟ್ರೋಫಿಯಲ್ಲಿ ಆಡಿದರೆ ಮೊದಲ ಟಿ-20 ಪಂದ್ಯ ಆಡುವಂತಿಲ್ಲ. ಇದನ್ನು ಬಿಸಿಸಿಐ ಕೂಡ ಗಮನದಲ್ಲಿಟ್ಟುಕೊಳ್ಳಲಿದೆ. 


ಇದನ್ನೂ ಓದಿ: ಇದು ಒಳ್ಳೆಯದಲ್ಲ... ಕೊಹ್ಲಿ-ರೋಹಿತ್‌ಗೆ 'ಸ್ಪೆಷಲ್ ಟ್ರೀಟ್‌ಮೆಂಟ್'? : ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ


ಶುಭಮನ್ ಗಿಲ್ & ಯಶಸ್ವಿ ಜೈಸ್ವಾಲ್‌ಗೆ ವಿಶ್ರಾಂತಿ!? 


ಇದಕ್ಕೂ ಮುನ್ನ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಟಿ-20 ಸರಣಿಯನ್ನು ಆಡಿತ್ತು. ಅದರಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಆ ಸರಣಿಯಲ್ಲಿ ಸಂಜು ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸಂಜು ವೈಫಲ್ಯ ಅನುಭವಿಸಿದರು. ಇದೀಗ ಬಿಸಿಸಿಐ ಸಂಜುಗೆ ಮತ್ತೊಂದು ಅವಕಾಶ ನೀಡುವತ್ತ ಚಿತ್ತ ಹರಿಸಿರುವಂತಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಆಡುತ್ತಿರುವ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ವಿಶ್ರಾಂತಿ ದೃಷ್ಟಿಯಿಂದ ಟಿ-20 ಸರಣಿಯಿಂದ ಹೊರಗಿಡಬಹುದು. ಇಂತಹ ಪರಿಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಓಪನಿಂಗ್‌ಗೆ ಮೊದಲ ಆಯ್ಕೆಯಾಗಬಹುದು. ಅಭಿಷೇಕ್ ಶರ್ಮಾ ಅವರ ಜೊತೆಗಾರನಾಗಿ ಸೇರ್ಪಡೆಗೊಳ್ಳಬಹುದು ಎಂದು ಹೇಳಲಾಗಿದೆ.  


ಅನೇಕ ಆಟಗಾರರಿಗೆ ವಿಶ್ರಾಂತಿ 


ಇದಷ್ಟೇ ಅಲ್ಲದೆ ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ರಿಷಬ್ ಪಂತ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಕೂಡ ಟಿ-20 ಸರಣಿಯ ಭಾಗವಾಗುವುದಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ವಾಸ್ತವವಾಗಿ ಟಿ-20 ಸರಣಿಯ ನಂತರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಸರಣಿ ಕೂಡ ನಡೆಯಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುತ್ತದೆ, ಆದ್ದರಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಯೋಜನೆ ರೂಪಿಸಬಹುದು. ಅದೇನೇ ಇರಲಿ ಸದ್ಯಕ್ಕೆ ಯಾವುದೇ ದೊಡ್ಡ ಟಿ-20 ಟೂರ್ನಿ ನಡೆಯುತ್ತಿಲ್ಲ. ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ ಹಾರ್ದಿಕ್ ಪಾಂಡ್ಯ ತಂಡದ ಪ್ರಮುಖ ಆಟಗಾರನಾಗಿ ಆಡಲಿದ್ದಾರೆ. 


ಇದನ್ನೂ ಓದಿ: IPL 2025: ಸ್ಟಾರ್‌ ಆಟಗಾರನನ್ನು ಕೈ ಬಿಟ್ಟ RCB ತಂಡ! ದೊಡ್ಡ ಮೊತ್ತದ ಶುಲ್ಕ ಕೇಳಿ ತಂಡದಿಂದ ಹೊರಬಿದ್ದ ಆ ಆಟಗಾರ ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.