ನವದೆಹಲಿ: ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು 4 ನೇ ದಿನದ ಆಟದಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸರಣಿಯನ್ನು1-1 ಸಮಬಲಗೊಳಿಸಿತು.


COMMERCIAL BREAK
SCROLL TO CONTINUE READING

ಮೊದಲ ಇನಿಂಗ್ಸ್ ನಲ್ಲಿ ಭಾರತ ತಂಡವು ಕೇವಲ 78 ರನ್ ಗಳಿಗೆ ಸರ್ವಪತನವನ್ನು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿಸಿತ್ತು, ಇದಾದ ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು 432 ರನ್ ಗಳ ಬೃಹತ್  ಮೊತ್ತವನ್ನು ಗಳಿಸಿತ್ತು, ಇಂಗ್ಲೆಂಡ್ ತಂಡದ ಪರವಾಗಿ ರೂಟ್ (121) ಭರ್ಜರಿ ಶತಕವನ್ನು ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.


Viral Video: ಕೆ.ಎಲ್.ರಾಹುಲ್‌ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ


ಇದಾದ ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಒಂದು ಹಂತದಲ್ಲಿ ಕೆ.ಎಲ್.ರಾಹುಲ್ 
(K L Rahul) ಅವರ ವಿಕೆಟ್ ನ್ನು ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದರೂ ಕೂಡ ರೋಹಿತ್ ಶರ್ಮಾ(59) ಮತ್ತು ಚೇತೆಶ್ವರ್ ಪೂಜಾರ್ (91) ಅವರ ಭರ್ಜರಿ ಬ್ಯಾಟಿಂಗ್ ನಿಂದ ಸುಸ್ಥಿತಿಯಲ್ಲಿತ್ತು, ಆದರೆ ನಾಲ್ಕನೇ ದಿನದಂದು ಅವರು ಬೇಗನೆ ವಿಕೆಟ್ ಕಳೆದುಕೊಂಡಿದ್ದರಿಂದಾಗಿ ತಂಡದ ಬ್ಯಾಟಿಂಗ್ ವೈಫಲ್ಯ ಪ್ರದರ್ಶನ ಹಾಗೆಯೇ ಮುಂದುವರೆಯಿತು.ವಿರಾಟ್ ಕೊಹ್ಲಿ ಕೂಡ ಅರ್ಧಶತಕಗಳಿಸಿದರೂ ಸಹಿತ ಬೃಹತ್ ಮೊತ್ತವನ್ನು ಅವರು ಗಳಿಸುವ ಎಡವುತ್ತಿದ್ದಾರೆ.


Viral Vdieo: ಜೇಮ್ಸ್ ಆಂಡರ್ಸನ್ ಗೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಏನು ಮಾಡಿದ್ದಾರೆ ನೋಡಿ..!


ಇವರಿಬ್ಬರ ನಂತರ ಬಂದಂತಹ ಅಜಿಂಕ್ಯಾ ರಹಾನೆ ಕೇವಲ ಕೇವಲ 10 ರನ್ ಗಳಿಸಿ ಹೊರ ನಡೆದರು. ಇದಾದ ನಂತರ ಭಾರತ ಉಳಿದ ಬ್ಯಾಟ್ಸಮನ್ ಗಳು ಬೇಗನೆ ವಿಕೆಟ್ ಒಪ್ಪಿಸಿದರು.ಇನ್ನೊಂದೆಡೆಗೆ ಇಂಗ್ಲೆಂಡ್ ತಂಡದ ಪರವಾಗಿ ಒಲ್ಲೆ ರಾಬಿನ್ಸನ್ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ