IND vs ENG Semi Final : ಕಳೆದ 10 ವರ್ಷಗಳಿಂದ ಸಾಧ್ಯವಾಗದನ್ನು ಸಾಧಿಸಲು ರೋಹಿತ್ ಶರ್ಮಾ ಅವರ ನಾಯಕತ್ವದ ಟೀಂ ಇಂಡಿಯಾ ಸಿದ್ದವಾಗಿದೆ. ಇಂದು ಇಂಗ್ಲೆಂಡ್‌ ವಿರುದ್ಧ ಭಾರತ ಸೆಣಸಲಿದೆ. ಭಾರತ ಕೊನೆಯ ಬಾರಿಗೆ 2014 ರಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಲಸಿತ್ ಮಾಲಿಂಗ ನಾಯಕತ್ವದಲ್ಲಿ ಶ್ರೀಲಂಕಾ ಆ ವರ್ಷ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ವರ್ಷ ಏನಾಗುತ್ತೋ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ


COMMERCIAL BREAK
SCROLL TO CONTINUE READING

ಮತ್ತೊಂದೆಡೆ, ಇಂಗ್ಲೆಂಡ್ ಹಾಲಿ ಚಾಂಪಿಯನ್ ಆಗಿದ್ದು, 2022 ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ಎರಡನೇ T20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ 4 ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, ಇಬ್ಬರೂ ತಲಾ 2 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ, ಇಂಗ್ಲೆಂಡ್ ಅಥವಾ ಭಾರತ ಸತತ ಗೆಲುವು ಸಾಧಿಸಿಲ್ಲ.


ಇದನ್ನೂ ಓದಿ:ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ಹಿಟ್‌ಮ್ಯಾನ್‌..!


2007ರಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 18 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2009ರಲ್ಲಿ ಇಂಗ್ಲೆಂಡ್ ಭಾರತವನ್ನು 3 ರನ್‌ಗಳಿಂದ ಸೋಲಿಸಿದರೆ, 2012ರಲ್ಲಿ ಭಾರತ ತಂಡ 90 ರನ್‌ಗಳಿಂದ ಜಯಭೇರಿ ಬಾರಿಸಿತ್ತು.


ರೋಹಿತ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಆಟಗಾರರು 2022 ರಲ್ಲಿ ಏನಾಯಿತು ಎಂಬುದನ್ನು ಮರೆಯುವುದಿಲ್ಲ. ಈ ಎಲ್ಲಾ ಆಟಗಾರರು ಜೋಸ್ ಬಟ್ಲರ್ ನಾಯಕತ್ವದಲ್ಲಿ  ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ಸೋಲಿಸಿದ ಭಾರತೀಯ ತಂಡದ ಭಾಗವಾಗಿದ್ದರು.


ಇದನ್ನೂ ಓದಿ:ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!


ಈ ಬಾರಿ ಭಾರತ ಹೆಚ್ಚು ಸಮತೋಲಿತ ತಂಡವನ್ನು ಹೊಂದಿದೆ. ಕೊಹ್ಲಿ ಹೊರತುಪಡಿಸಿದರೆ ಭಾರತೀಯ ಬ್ಯಾಟ್ಸ್ ಮನ್‌ಗಳು ಉತ್ತಮ ಫಾರ್ಮ್ ತೋರುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಈ ಬಾರಿ ತಂಡದ ಭಾಗವಾಗಿದ್ದಾರೆ.  


IND vs ENG: ಹವಾಮಾನ ಮತ್ತು ಪಿಚ್ ವರದಿ : IND vs ENG ಪಂದ್ಯವು ಗಯಾನಾ ನ್ಯಾಷನಲ್ ಸ್ಟೇಡಿಯಂ ಎಂದು ಕರೆಯಲ್ಪಡುವ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸ್ಟೇಡಿಯಂನಲ್ಲಿ ಸ್ಪಿನ್ ಬೌಲಿಂಗ್‌ ವಿಶಿಷ್ಟವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲೆಂಡ್ 75 ರನ್‌ಗಳಿಗೆ ಆಲೌಟ್ ಆದ ಸ್ಥಳವೂ ಇದೇ.


ಇದನ್ನೂ ಓದಿ: ರೋಹಿತ್ ಶರ್ಮಾ ಸಿಕ್ಸರ್ ಸುರಿಮಳೆ… ಹಿಟ್’ಮ್ಯಾನ್ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ದಾಟಿ ಹೊರಹೋದ ಬಾಲ್!


ದಿನದಲ್ಲಿ ಒಂದೆರಡು ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಅಕ್ಯುವೆದರ್ ಪ್ರಕಾರ, ಪಂದ್ಯದ ಸಮಯದಲ್ಲಿ 25% ಮಳೆಯಾಗುವ ಸಾಧ್ಯತೆಯಿದೆ ಮತ್ತು 95% ಮೋಡ ಕವಿದ ವಾತಾವರಣ ಇರಲಿದೆ. ತಾಪಮಾನವು ಸುಮಾರು 30 ಡಿಗ್ರಿಗಳಷ್ಟಿರುತ್ತದೆ. ಪಂದ್ಯದ ಮೇಲೆ ಮಳೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.