ಟೀಂ ಇಂಡಿಯಾದ ಮುಂಬರುವ ಐರ್ಲ್ಯಾಂಡ್ ಪ್ರವಾಸಕ್ಕೆ ಆಯ್ಕೆಗಾರರು ತಂಡವನ್ನು ಪ್ರಕಟಿಸಿದ್ದಾರೆ. ಈ ಟೀಂಗೆ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಮಾಡಲಾಗಿದೆ. ಜೊತೆಗೆ ಭುವನೇಶ್ವರ್ ಕುಮಾರ್‌ಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ ತಂಡದಲ್ಲಿ ಆಯ್ಕೆಗಾರರು ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಅನ್ನು ಕಡೆಗಣಿಸಿದ್ದಾರೆ. ಈ ಬೌಲರ್ ತನ್ನ ಕಿಲ್ಲರ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾನೆ.


COMMERCIAL BREAK
SCROLL TO CONTINUE READING

ಐರ್ಲ್ಯಾಂಡ್ ಪ್ರವಾಸದಲ್ಲಿ ಆಯ್ಕೆಗಾರರು ಮಾರಕ ಬೌಲರ್ ಟಿ. ನಟರಾಜನ್‌ ಗೆ ಸ್ಥಾನ ನೀಡಿಲ್ಲ. ಐಪಿಎಲ್ 2022ರ ಸೀಸನ್‌ನಲ್ಲಿ ನಟರಾಜನ್ ಅದ್ಭುತ ಆಟ ಪ್ರದರ್ಶಿಸಿದ್ದರು. ಇನ್ನು ನಟರಾಜನ್ ಅವರ ದೊಡ್ಡ ಶಕ್ತಿ ಎಂದರೆ ಬೌಲಿಂಗ್ ಯಾರ್ಕರ್‌ಗಳು. ಆದರೆ ಈ ಬಾರಿಯ ಐರ್ಲ್ಯಾಂಡ್‌ ಪ್ರವಾಸದಲ್ಲಿ ನಟರಾಜನ್‌ ಕಾಣಿಸಿಕೊಳ್ಳುತ್ತಿಲ್ಲ. 


ಇದನ್ನೂ ಓದಿ: Edible Oil Price : ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರೀ ಇಳಿಕೆ .. !


ಐಪಿಎಲ್ 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಟಿ ನಟರಾಜನ್ ಅದ್ಭುತವಾಗಿ ಆಟವಾಡಿದ್ದರು.  ಇನ್ನು ನಟರಾಜನ್ 11 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಆದರೆ ಐರ್ಲ್ಯಾಂಡ್ ಪ್ರವಾಸಕ್ಕೆ ಯಾವ ಕಾರಣದಿಂದ ಆಯ್ಕೆ ಮಾಡಿಲ್ಲ ಎಂಬುದು ತಿಳಿದಿಲ್ಲ. ಮುಖ್ಯವಾಗಿ ಹೇಳುವುದಾದರೆ, ಟಿ ನಟರಾಜನ್‌ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗಿಂತ ಅದ್ಭುತವಾಗಿ ಆಟವಾಡುತ್ತಾರೆ.  


ಟಿ.ನಟರಾಜನ್ ಭಾರತ ತಂಡಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. 2020 ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಮೂಲಕ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ 4 ಟಿ20 ಪಂದ್ಯಗಳನ್ನು ಆಡಿದ್ದು, ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ 2 ಒಡಿಐಗಳಲ್ಲಿ ಆಡಿದ್ದು ಅದರಲ್ಲಿ ಮೂರು ವಿಕೆಟ್ ಮತ್ತು ಒಂದು ಟೆಸ್ಟ್ ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. 


ಐರ್ಲ್ಯಾಂಡ್ ವಿರುದ್ಧ ಭಾರತ ತಂಡ ಆಟವಾಡಲಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಐಪಿಎಲ್ 2022 ಚಾಂಪಿಯನ್‌ಶಿಪ್‌ ಗರಿಯನ್ನು ಗೆದ್ದುಕೊಂಡಿತು. ಹಾರ್ದಿಕ್  ಭಾರತ ತಂಡದ ಆಲ್‌ರೌಂಡರ್‌ ಆಟಗಾರ. ಐಪಿಎಲ್‌ನ 15 ಪಂದ್ಯಗಳಲ್ಲಿ ಹಾರ್ದಿಕ್ 487 ರನ್ ಗಳಿಸಿದ್ದು, 8 ವಿಕೆಟ್‌ಗಳನ್ನು ಪಡೆದಿದ್ದಾರೆ. 


ಇದನ್ನೂ ಓದಿ: Swiss Bank: ಸ್ವಿಸ್ ಬ್ಯಾಂಕಿನಲ್ಲಿದೆ ಭಾರತೀಯರ 30,600 ಕೋಟಿ ರೂ. ಹಣ


ಐರ್ಲ್ಯಾಂಡ್ ಸರಣಿಗೆ ಭಾರತ ತಂಡ ಪ್ರಕಟ:
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿ.ಕೀ), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.