India vs New Zealand, 2nd T20I: ಮಿಂಚಿದ ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಭಾರತಕ್ಕೆ ಸರಣಿ ಜಯ
ರಾಂಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡವು ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಆ ಮೂಲಕ ಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ.
ನವದೆಹಲಿ: ರಾಂಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡವು ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಆ ಮೂಲಕ ಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ-ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ : ಸರ್ಕಾರದ ಈ ನಿರ್ಧಾರದಿಂದ ಸಿಗಲಿದೆ ಭಾರೀ ಲಾಭ
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ಆರಂಭದಲ್ಲಿ ನ್ಯೂಜಿಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಲು ಪರದಾಡಿದರೂ ಸಹಿತ ನಂತರ ಹಿಡಿತ ಸಾಧಿಸಿದರು. ಇದರಿಂದಾಗಿ ನ್ಯೂಜಿಲೆಂಡ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 153 ರನ್ ಗಳಿಸಿತು. ನ್ಯೂಜಿಲೆಂಡ್ ಪರವಾಗಿ ಗ್ಲೆನ್ ಫಿಲಿಪ್ಸ್ 34,ಗುಪ್ತಿಲ್ 31, ಡೈರ್ಲ್ ಮಿಚೆಲ್ 31 ರನ್ ಗಳಿಸಿ ತಂಡಕ್ಕೆ ನೆರವಾದರು.
Mobile Phone Fells in Train: ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಬಿದ್ದರೆ, ಅದನ್ನು ಈ ರೀತಿ ಹಿಂಪಡೆಯಬಹುದು
154 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಕೆ.ಎಲ್ ರಾಹುಲ್ (KL Rahul) ಅವರ 65 ಹಾಗೂ ರೋಹಿತ್ ಶರ್ಮಾ 55 ಅವರ ಭರ್ಜರಿ 117 ರನ್ ಗಳ ಮೊದಲ ವಿಕೆಟ್ ಜೊತೆಯಾಟದಿಂದಾಗಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಕೊನೆಗೆ ಭಾರತ ತಂಡವು ಮೂರು ವಿಕೆಟ್ ಕಳೆದುಕೊಂಡು 17.2 ಓವರ್ ಗಳಲ್ಲಿ 155 ರನ್ ಗಳಿಸುವ ಮೂಲಕ ಗೆಲುವಿನ ದಡವನ್ನು ಸೇರಿತು.
ಇದನ್ನೂ ಓದಿ-Indian Railways: ರೈಲ್ವೆಯ ಈ ಪ್ರಮುಖ ನಿಯಮ 6 ತಿಂಗಳವರೆಗೆ ವಿಸ್ತರಣೆ, ಉಲ್ಲಂಘಿಸಿದರೆ ಬೀಳುತ್ತೆ ದಂಡ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ