India vs New Zealand 3rd ODI : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಕಾರಣದಿಂದ ಟೀಂ ಇಂಡಿಯಾ 0-1 ಅಂತರದಲ್ಲಿ ಸರಣಿಯನ್ನು ಸೋತಿದೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಗಿತ್ತು, ಆದರೆ ಭಾರತ ತಂಡದ ಸರಣಿ ಸೋಲಿನಲ್ಲೂ ಟೀಂ ಇಂಡಿಯಾಗೆ ಈ ಆಟಗಾರ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಆಟಗಾರ ರವೀಂದ್ರ ಜಡೇಜಾ ರೀತಿ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

3ನೇ ಏಕದಿನ ಪಂದ್ಯದಲ್ಲಿ ಈ ಆಟಗಾರ ಅದ್ಭುತ ಪ್ರದರ್ಶನ


ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ನಿಂದ ಹೀನಾಯವಾಗಿ ಸೋತಿತ್ತು. ಶ್ರೇಯಸ್ ಅಯ್ಯರ್ ಮತ್ತು ಶಿಖರ್ ಧವನ್ ಔಟಾದ ನಂತರ, ಭಾರತದ ಬ್ಯಾಟಿಂಗ್ ಕುಸಿಯಿತು, ಆದರೆ ಅದರ ನಂತರ ಬಂದ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅದ್ಭುತ ಇನ್ನಿಂಗ್ಸ್ ಆಡಿದರು. ಸುಂದರ್ ನಿಂದಾಗಿ ಟೀಂ ಇಂಡಿಯಾ ಗೌರವಾನ್ವಿತ ಸ್ಕೋರ್ ತಲುಪಲು ಸಾಧ್ಯವಾಯಿತು. ಸುಂದರ್ ಗ್ರೌಂಡ್ ನಲ್ಲಿ  ಸ್ಟ್ರೋಕ್ಗಳನ್ನು ಹೊಡೆದು 64 ಎಸೆತಗಳಲ್ಲಿ 51 ರನ್ ಗಳಿಸಿದರು.


ಇದನ್ನೂ ಓದಿ : IND vs NZ : ಮೂರನೇ ಪಂದ್ಯಕ್ಕೆ ಮತ್ತೆ ವಿಲನ್ ಆದ ಮಳೆ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು!


ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳನ್ನು ಆಡಿದ ಸುಂದರ್


ವಾಷಿಂಗ್ಟನ್ ಸುಂದರ್ ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಬಳಿಸುವಲ್ಲಿ ಅವರು ನಿಷ್ಣಾತ ಆಟಗಾರ. ಅವರು ಭಾರತಕ್ಕಾಗಿ 4 ಟೆಸ್ಟ್ ಪಂದ್ಯಗಳು, 9 ODI ಮತ್ತು 32 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸುಂದರ್ ಬೌಲಿಂಗ್ ದಾಳಿಗೆ ಎದುರಾಳಿಗಳು ಎದೆ ನಡುತ್ತದೆ, ಆ ರೀತಿಯ ಸಾಮರ್ಥ್ಯ ಹೊಂದಿದ್ದಾರೆ.


ಸರಣಿ ಕಳೆದುಕೊಂಡಿತು ಟೀಂ ಇಂಡಿಯಾ


ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 0-1 ಅಂತರದ ಸೋಲು ಕಂಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‌ಗಳು ಅತ್ಯುತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತ ಸೋಲನ್ನು ಎದುರಿಸಬೇಕಾಯಿತು. ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.ಹಾಗೆ, ಇಂದು ಕೂಡ ಮೂರನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.


ಇದನ್ನೂ ಓದಿ : Rahul Dravid-Rohit Sharma Meeting: ದ್ರಾವಿಡ್- ರೋಹಿತ್ ಶರ್ಮಾಗೆ ಬಿಸಿಸಿಐ ಬಿಗ್ ರಿಲೀಫ್! ಸಭೆ ಮುಂದೂಡಿದ ಮಂಡಳಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.