ನವದೆಹಲಿ: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು18 ರನ್‌ಗಳಿಂದ ಸೋಲಿಸಿ ನ್ಯೂಜಿಲೆಂಡ್ ತಂಡ ವಿಶ್ವಕಪ್ ಫೈನಲ್ ತಲುಪಿದೆ.



COMMERCIAL BREAK
SCROLL TO CONTINUE READING

ನ್ಯೂಜಿಲೆಂಡ್ ನೀಡಿದ್ದ 240 ರನ್ ಗೆಲುವಿನ ಗುರಿ ಬೆನ್ನತಿದ್ದ ಭಾರತ ತಂಡವು ಮೂರು ಎಸೆತಗಳು ಬಾಕಿ ಇರುವಾಗ 221 ರನ್ ಗಳಿಗೆ ಆಲೌಟ್ ಆಯಿತು. 240 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಆರಂಭದಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಲೋಕೇಶ್ ರಾಹುಲ್ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 



ಒಂದು ಹಂತದಲ್ಲಿ ರಿಶಬ್ ಪಂತ (32) ಹಾರ್ದಿಕ್ ಪಾಂಡ್ಯ(32) ರನ್ ಗಳಿಸುವ ಮೂಲಕ ಭದ್ರ ನೆಲೆಯನ್ನು ಒದಗಿಸುವ ಸೂಚನೆ ನೀಡಿದ್ದರು. ಆದರೆ ನಂತರ ಅವರು ವಿಕೆಟ್ ಒಪ್ಪಿಸಿ ಹೊರ ನಡೆಸಿದರು. ನಂತರ ಜೊತೆಗೂಡಿದ ಧೋನಿ ಹಾಗೂ ರವಿಂದ್ರ ಜಡೇಜಾ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು. ಆದರೆ ಕೊನೆಯ ಹಂತದಲ್ಲಿ ಜಡೇಜಾ ಅವರು ಬೌಲ್ಟ್ ಎಸೆತದಲ್ಲಿ ಕ್ಯಾಚ್ ಒಪ್ಪಿಸಿ ಔಟಾದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಂಡ ರವಿಂದ್ರ ಜಡೇಜಾ ತಮ್ಮ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಗಮನ ಸೆಳೆದರು. 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಜಡೇಜಾ, ನಾಲ್ಕು ಭರ್ಜರಿ ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಗಳ ಮೂಲಕ 59 ಎಸೆತಗಳಲ್ಲಿ 77 ರನ್ ಗಳಿಸಿದರು.



ಇನ್ನೊಂದೆಡೆ ಧೋನಿ(50) ಕೂಡ ಜಡೇಜಾ ಜೊತೆಯಾಗಿ ಶತಕದ ಜೊತೆಯಾಟದ ಮೂಲಕ ಪಂದ್ಯ ಭಾರತದ ಪರವಾಗಿ ವಾಲುವಂತೆ ಮಾಡಿದ್ದರು.ಆದರೆ ಗುಪ್ತಿಲ್ ಅವರಿಗೆ ರನ್ ಔಟ್ ಆಗುವ ಮೂಲಕ  ಹೊರ ನಡೆದಾಗ ಪಂದ್ಯ ನ್ಯೂಜಿಲೆಂಡ್ ಪರವಾಗಿ ವಾಲಿತ್ತು.ನ್ಯೂಜಿಲೆಂಡ್ ಪರವಾಗಿ ಮ್ಯಾಟ್ ಹೆನ್ರಿ ಮೂರು ವಿಕೆಟ್ ಗಳನ್ನು ಪಡೆದರೆ, ಟ್ರೆಂಟ್ ಬೌಲ್ಟ್ ಮೈಕಲ್ ಸಾಂತೆರ್  ತಲಾ ಎರಡು ವಿಕೆಟ್ ಗಳನ್ನೂ ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.