ಏಷ್ಯಾ ಕಪ್ 2022: 2021 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಹೃದಯವಿದ್ರಾವಕ ಸೋಲಿನ ನಂತರ, ಭಾರತವು  ಏಷ್ಯಾ ಕಪ್‌ನ ಅಭಿಯಾನದ ಉದ್ಘಾಟನಾ ಪಂದ್ಯದಲ್ಲಿ ತನ್ನ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.  ಏಷ್ಯಾ ಕಪ್‌ನಲ್ಲಿ ಭಾರತ vs ಪಾಕಿಸ್ತಾನದ ಪಂದ್ಯ ವೀಕ್ಷಣೆಗಾಗಿ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ಈ ಮಧ್ಯೆ, ಭಾರತ ಮತ್ತು ಪಾಕಿಸ್ತಾನದ ಘರ್ಷಣೆಗೆ ಮುಂಚಿತವಾಗಿ ನೆಟ್ಸ್‌ನಲ್ಲಿ  ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ತಯಾರಿಯ ವಿಡಿಯೋ ಒಂದು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಭಾನುವಾರ (ಆಗಸ್ಟ್ 28) ದಂದು 2022 ರ ಏಷ್ಯಾ ಕಪ್‌ನಲ್ಲಿ ಭಾರತ vs ಪಾಕಿಸ್ತಾನ ತಂಡದ ನಡುವೆ ನಡೆಯಲಿರುವ ಪಂದ್ಯಾವಳಿಗೂ  ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಳಿಯ ಮೂಡ್‌ನಲ್ಲಿ ಕಾಣಿಸಿಕೊಂಡರು. ಯುಎಇ ನೆಟ್ಸ್ ತರಬೇತಿ ಅವಧಿಯಲ್ಲಿ ರೋಹಿತ್ ಭಾರತದ ಬೌಲಿಂಗ್‌ನಲ್ಲಿ ಅಬ್ಬರಿಸುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ- ವಿರಾಟ್ ಮತ್ತು ಬಾಬರ್ ಇಬ್ಬರಲ್ಲಿ ಏಷ್ಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು? ಅಂಕಿ-ಅಂಶಗಳು ಏನು ಹೇಳುತ್ತೆ?


ಭಾರತ vs ಪಾಕಿಸ್ತಾನ ಏಷ್ಯಾ ಕಪ್ 2022 ರ ಮೊದಲು, ಮೆನ್ ಇನ್ ಬ್ಲೂ ನಾಯಕ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ತಮ್ಮದೇ ಬೌಲಿಂಗ್ ದಾಳಿಯ ವಿರುದ್ಧ ಸಿಕ್ಸರ್‌ಗಳನ್ನು ಹೊಡೆಯುತ್ತಿರುವುದು ಕಂಡುಬಂದಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾರ ಈ ಬ್ಲಾಕ್‌ಬಸ್ಟರ್ ಘರ್ಷಣೆಯ ಹಿಂದೆ ಕೋಚ್ ರಾಹುಲ್ ದ್ರಾವಿಡ್ ಅವರ ಆಕ್ರಮಣಕಾರಿ ವಿಧಾನವು ಸ್ಪಷ್ಟವಾಗಿ ಗೋಚರಿಸುತ್ತದೆ. 


ಏಷ್ಯಾ ಕಪ್‌ಗಾಗಿ ಹಿಟ್ ಮ್ಯಾನ್ ತಯಾರಿ ಹೇಗಿದೆ ಎಂದು ಇಲ್ಲಿ ವೀಕ್ಷಿಸಿ -


Asia Cup 2022: ಏಷ್ಯಾಕಪ್‌ಗೂ ಮುನ್ನ ಪಾಕಿಸ್ತಾನದ ಬಲಿಷ್ಠ ನಡೆ, ಟೀಂ ಇಂಡಿಯಾಗೆ ದೊಡ್ಡ ಸಂಕಷ್ಟ?


ಏಷ್ಯಾ ಕಪ್‌ ಪಂದ್ಯಕ್ಕೂ ಮೊದಲು ಮಾತನಾಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಎಲ್ಲರೂ ಆಟವನ್ನು ವೀಕ್ಷಿಸುತ್ತಾರೆ ಮತ್ತು ಇದು ನಿಸ್ಸಂದೇಹವಾಗಿ ಹೆಚ್ಚಿನ ಒತ್ತಡದ ಆಟವಾಗಿದೆ. ಆದರೆ ಗುಂಪಿನೊಳಗೆ ನಾವು ಸಾಮಾನ್ಯ ವಾತಾವರಣವನ್ನು ಸೃಷ್ಟಿಸಲು ಬಯಸುತ್ತೇವೆ ಎಂದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.