ನವದೆಹಲಿ:  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಏಕದಿನದ ಕ್ರಿಕೆಟ್ ಪಂದ್ಯದಲ್ಲಿ ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ 11 ಸಾವಿರ ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧ ಪಂದ್ಯದಲ್ಲಿ 222 ಇನ್ನಿಂಗ್ಸ್ ನಲ್ಲಿ 11 ಸಾವಿರ ರನ್ ಗಳ ಗಡಿ ತಲುಪುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು.



COMMERCIAL BREAK
SCROLL TO CONTINUE READING

ಜನವರಿ 28, 2002 ರಂದು ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರು 11,000 ರನ್ ಗಳಿಸಿದರು. ಅವರು ಈ ಸಾಧನೆ ಮಾಡಲು  276 ಇನ್ನಿಂಗ್ಸ್ ಮತ್ತು 284 ಏಕದಿನ ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ವಿರಾಟ್ ಕೊಹ್ಲಿ  222 ನೇ ಇನ್ನಿಂಗ್ಸ್ ಮತ್ತು 230 ನೇ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. 1989 ರಲ್ಲಿ ಚೊಚ್ಚಲ ಶತಕ ದಾಖಲಿಸಿದ ಸಚಿನ್ ಗೆ ಈ ಸಾಧನೆ ಮಾಡಲು 12 ವರ್ಷ ಮತ್ತು 41 ದಿನಗಳನ್ನು ತೆಗೆದುಕೊಂಡರೆ ಕೊಹ್ಲಿ ಈ ಸಾಧನೆಯನ್ನು 11 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡಿದ್ದಾರೆ. 



ಇನ್ನೊಂದೆಡೆಗೆ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಹೆಚ್ಚು ಶತಕ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಹಂತಕ್ಕೆ ಬಂದಿದ್ದಾರೆ. 49 ಶತಕಗಳೊಂದಿಗೆ ತೆಂಡೂಲ್ಕರ್ ಅಗ್ರಸ್ತಾನದಲ್ಲಿದ್ದರೆ ವಿರಾಟ್ ಕೊಹ್ಲಿ ಈಗಾಗಲೇ 41 ಶತಕಗಳನ್ನು ಪಡೆದಿದ್ದಾರೆ. 



ಒಟ್ಟಾರೆಯಾಗಿ, ಸಚಿನ್, ಕುಮಾರ್ ಸಂಗಕ್ಕಾರ, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ, ಮಹೇಲಾ ಜಯವರ್ಧನೆ, ಇಂಜಮಾಮ್-ಉಲ್-ಹಕ್, ಜಾಕ್ವೆಸ್ ಕಲ್ಲಿಸ್ ಮತ್ತು ಸೌರವ್ ಗಂಗೂಲಿ ನಂತರ 11,000 ಸಾವಿರ  ರನ್ ಗಳಿಸಿದ  9 ನೇ ಆಟಗಾರ  ಎನ್ನುವ ಖ್ಯಾತಿ ವಿರಾಟ್ ಕೊಹ್ಲಿಯವರದ್ದು . ಭಾರತದ ಪರವಾಗಿ ಈ ಸಾಧನೆ ಮಾಡಿದೆ ಮೂರನೇ ಆಟಗಾರ ರಾಗಿದ್ದಾರೆ  ಇದಕ್ಕೂ ಮೊದಲು  ತೆಂಡೂಲ್ಕರ್ ಮತ್ತು ಗಂಗೂಲಿ ಈ ಸಾಧನೆ ಮಾಡಿದ್ದಾರೆ.