ನವದೆಹಲಿ: ಇತ್ತೀಚಿಗಷ್ಟೇ ಭಾರತದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ 434 ಟೆಸ್ಟ್ ದಾಖಲೆಯನ್ನು ಹಿಂದಿಕ್ಕಿದ ಆರ್.ಆಶ್ವಿನ್ ಈಗ ಈ ದಾಖಲೆ ಹಿಂದಿನ ಪ್ರೇರಣೆ ಕುರಿತಾಗಿ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಕೇವಲ 85 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಆರ್.ಅಶ್ವಿನ್ (Kapil Dev) ಅವರು ಬಾಲ್ಯದಲ್ಲಿದ್ದಾಗ ತಾವು ಕಪಿಲ್ ದೇವ್ ರೀತಿ ಆಗಲು ಕನಸು ಕಂಡಿದ್ದಾದಾಗಿ ಹೇಳಿದರು.


"ತುಂಬಾ ವಿನೀತನಾಗಿದ್ದೇನೆ, 28 ವರ್ಷಗಳ ಹಿಂದೆ, ಕಪಿಲ್ ಪಾಜಿ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನು ಹಿಂದಿಕ್ಕಿದಾಗ ನಾನು ನನ್ನ ತಂದೆಯವರ ಜೊತೆಗೆ ಅವರನ್ನು ಹುರಿದುಂಬಿಸುತ್ತಿದ್ದೆ, ನನ್ನ ಹುಚ್ಚು ಕನಸಿನಲ್ಲಿಯೂ ಸಹ, ನಾನು ಅವರ ವಿಕೆಟ್‌ಗಳ ಸಂಖ್ಯೆಯನ್ನು ಮೀರಿ ಹೋಗಬೇಕೆಂದು ನಾನು ಎಂದಿಗೂ ಯೋಚಿಸಲಿಲ್ಲ, ಏಕೆಂದರೆ ನಾನು ಎಂಟು ವರ್ಷದವನಾಗಿದ್ದಾಗ ಯಾವಾಗಲೂ ಬ್ಯಾಟ್ಸಮನ್ ಆಗಲು ಪ್ರಯತ್ನಿಸುತ್ತಿದ್ದೆ' ಎಂದು ಅವರು ಹೇಳಿದರು. 


ಇದನ್ನೂ ಓದಿ: IND vs SL: ಟೀಂ ಇಂಡಿಯಾಕ್ಕೆ ಅಪಾಯಕಾರಿ ಆಟಗಾರನ ದಿಢೀರ್ ಎಂಟ್ರಿ, ಶ್ರೀಲಂಕಾ ತಂಡದಲ್ಲಿ ನಡುಕ


''1994ರಲ್ಲಿ ಬ್ಯಾಟಿಂಗ್ ನನ್ನ ಆಕರ್ಷಣೆಯಾಗಿತ್ತು. ಸಚಿನ್ ತೆಂಡೂಲ್ಕರ್ ಅವರು ಆಗಷ್ಟೇ ಜನಪ್ರಿಯರಾಗುತ್ತಿದ್ದರು, ಕಪಿಲ್ ದೇವ್ ಅವರು ಆಗ ಅತ್ಯುತ್ತಮ ಬೌಲರ್ ಆಗಿದ್ದರು" ಎಂದು ಆಶ್ವಿನ್ ಹೇಳಿದರು.


Ravichandran Ashwin) ಅವರು ಹಿಂದಿಕ್ಕಿದ್ದಾರೆ.


ಇದನ್ನೂ ಓದಿ: India vs SL 1st Test: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ಆರ್.ಅಶ್ವಿನ್


'ವಾಸ್ತವವಾಗಿ, ನಾನು ಆಗ ನನ್ನ ತಂದೆಯ ಸಲಹೆಯ ಮೇರೆಗೆ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೆ, ಇದರಿಂದ ನಾನು ಮುಂದಿನ ಕಪಿಲ್ ಪಾಜಿಯಾಗಲು ಪ್ರಯತ್ನಿಸಬಹುದು ಎನ್ನುವುದಾಗಿತ್ತು, ಅಂದಿನಿಂದ ಆಫ್ ಸ್ಪಿನ್ನರ್ ಆಗಲು ಮತ್ತು ಇಷ್ಟು ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಲು...ನಾನು ಭಾರತಕ್ಕಾಗಿ ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ.ಈ ಸಾಧನೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ವಿನಮ್ರನಾಗಿದ್ದೇನೆ' ಎಂದು ಅವರು ಹೇಳಿದರು.


ಸಕ್ರಿಯ ಟೆಸ್ಟ್ ಕ್ರಿಕೆಟಿಗರಲ್ಲಿ, ಇಂಗ್ಲೆಂಡ್ ವೇಗದ ಬೌಲರ್ ಗಳಾದ ಸ್ಟುವರ್ಟ್ ಬ್ರಾಡ್ (537) ಮತ್ತು ಜೇಮ್ಸ್ ಆಂಡರ್ಸನ್ (640) ನಂತರ ಅಶ್ವಿನ್ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.