ದ್ವಿತೀಯ ಟೆಸ್ಟ್: ಕನ್ನಡಿಗ ಮಾಯಂಕ್ ಅಗರವಾಲ್ ಶತಕ, ಸುಸ್ಥಿತಿಯಲ್ಲಿ ಭಾರತ
ಪುಣೆಯಲ್ಲಿನ ಎಂಸಿಎಎಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಾಯಂಕ್ ಅಗರವಾಲ್ ಅವರ ಶತಕ(108) ರನ್ ಗಳ ನೆರವಿನಿಂದಾಗಿ ಭಾರತ ಮೂರು ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದೆ.
ನವದೆಹಲಿ: ಪುಣೆಯಲ್ಲಿನ ಎಂಸಿಎಎಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಾಯಂಕ್ ಅಗರವಾಲ್ ಅವರ ಶತಕ(108) ರನ್ ಗಳ ನೆರವಿನಿಂದಾಗಿ ಭಾರತ ಮೂರು ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ರಬಾಡಾ ಅವರು ಆರಂಭದಲ್ಲೇ ರೋಹಿತ್ ಶರ್ಮಾ ಅವರನ್ನು ತಂಡದ ಮೊತ್ತ 25 ಆಗಿದ್ದಾಗ ವಿಕೆಟ್ ತೆಗೆಯುವ ಮೂಲಕ ಆಘಾತ ನೀಡಿದರು. ಇದಾದ ನಂತರ ಮಾಯಂಕ್-ಪೂಜಾರ್ ಜೋಡಿಯೂ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಮಾಯಂಕ್ ಅಗರ್ ವಾಲ್ 108 ರನ್ ಹಾಗೂ ಪೂಜಾರ್ 58 ರನ್ ಗಳಿಸಿ ಔಟಾದರು.
ಮೊದಲ ಟೆಸ್ಟ್ ನಲ್ಲಿ ದ್ವಿಶತಕ ಸಿಡಿಸಿದ್ದ ಮಾಯಾಂಕ್ ಈ ಪಂದ್ಯದಲ್ಲೂ ಶತಕ ಸಿಡಿಸುವ ಮೂಲಕ ಭಾರತದ ಆರಂಭಿಕ ಆಟಗಾರನಾಗಿ ನೆಲೆಯೂರುವ ಸಾಧ್ಯತೆಯನ್ನು ಹೆಚ್ಚಿಸಿದರು. ಇನ್ನೊಂದೆಡೆಗೆ ರೋಹಿತ್ ಶರ್ಮಾ ಇಂದು ಕೇವಲ 14 ರನ್ ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.