ನವದೆಹಲಿ: ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಸರ್ವ ಪತನ ಕಂಡಿದೆ. ಆ ಮೂಲಕ ಭಾರತ ತಂಡ ಈಗ 326 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.



COMMERCIAL BREAK
SCROLL TO CONTINUE READING

ಭಾರತ ಪರವಾಗಿ ಮಾರಕ ಬೌಲಿಂಗ್ ದಾಳಿ ಮಾಡಿದ ಆರ್ ಅಶ್ವಿನ್ 4 ಹಾಗೂ ಉಮೇಶ್ ಯಾದವ್ 3 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಕೇಶವ್ ಮಹರಾಜ್ 72, ಹಾಗೂ ದುಫ್ಲೆಶಿಸ್ 61 ರನ್ ಗಳ ಮೂಲಕ ಹೋರಾಟ ನಡೆಸಿದರಾದರು ಕೂಡ ಭಾರತದ ಬೌಲರ್ ಗಳು ಅವರನ್ನು ಕಟ್ಟಿ ಹಾಕಿದರು.


ಭಾರತ ತಂಡ ನಿನ್ನೆ ಮಾಯಂಕ್ ಅಗರವಾಲ್ (108) ವಿರಾಟ್ ಕೊಹ್ಲಿ( 254) ಹಾಗೂ ರವಿಂದ್ರ ಜಡೇಜಾ (91) ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಐದು ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಮೊತ್ತ 53 ಆಗುವಷ್ಟರಲ್ಲಿ ಐದು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ದುಫ್ಲೆಸಿಸ್ ಹಾಗೂ ಕೇಶವ್ ಮಹಾರಾಜ್ ಅವರ ಶತಕದ ಜೊತೆಯಾಟ ತಂಡವನ್ನು 250 ರ ಗಡಿಯನ್ನು ದಾಟಲು ನೆರವಾಯಿತು.