ನವದೆಹಲಿ: ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 506 ರನ್ ಗಳಿಸಿದೆ.


COMMERCIAL BREAK
SCROLL TO CONTINUE READING

ನಿನ್ನೆ ದಿನ ಭಾರತದ ಆರಂಭಿಕ ಆಟಗಾರ ಶತಕ (108) ಗಳಿಸಿದರೆ, ಇಂದು ಬ್ಯಾಟಿಂಗ್ ಮುಂದುವರೆಸಿರುವ ವಿರಾಟ್ ಕೊಹ್ಲಿ ಈಗ 308 ಎಸೆತಗಳಲ್ಲಿ 211 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ. ಈಗ ಅವರು ಏಳನೇ ದ್ವಿಶತಕದ ಸಾಧನೆ ಮಾಡಿದ್ದಾರೆ.ಆ ಮೂಲಕ ನಾಯಕನಾಗಿ 150ಕ್ಕೂ ಅಧಿಕ ರನ್ ಗಳನ್ನು ಗಳಿಸಿದ ಆಟಗಾರ ಎನ್ನುವ ಖ್ಯಾತಿ ಪಡೆದರು.ಮತ್ತು ಇದೇ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು 7000 ಸಾವಿರ ರನ್ ಗಳನ್ನು ಗಳಿಸಿದರು.



ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲಿ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತಾದರೂ ಮಾಯಂಕ್ ಅಗರವಾಲ್ ಹಾಗೂ ಪೂಜಾರ ಅವರ ಶತಕದ ಬ್ಯಾಟಿಂಗ್ ನೆರವಿಂದ ಸುಸ್ಥಿತಿಗೆ ತಲುಪಿತು. ನಿನ್ನೆ ಅಜೇಯರಾಗಿ ಉಳಿದಿದ್ದ ನಾಯಕ ವಿರಾಟ್ ಕೊಹ್ಲಿ ಇಂದು ಶತಕವನ್ನು ಪೂರೈಸಿ ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು.  ಇವರಿಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯಾ ರಹಾನೆ 59 ರನ್ ಗಳಿಸಿ ಔಟಾದರು. 



ನಿನ್ನೆ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ರಬಾಡಾ ಅವರು ಭಾರತದ ಮೂರು ಆರಂಭಿಕ ವಿಕೆಟ್ ಗಳನ್ನು ಕಬಳಿಸುವ ಮೂಲಕ ಪರಿಣಮಿಸಿದ್ದರು. ಆದರೆ ಇಂದು ಅವರು ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ.